ವಾಷಿಂಗ್ಟನ್: ಅಮೆರಿಕ ಏರ್‌ಫೋರ್ಸ್ ತನ್ನ ಹೊಸ ಅತ್ಯಾಧುನಿಕ ವಿಮಾನ B-21 ರೈಡರ್ ಫೈಟರ್‌ಜೆಟ್ ಅನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ನಾರ್ತ್‌ರಾಪ್ ಗ್ರುಮ್ಮನ್ ಕಂಪನಿಯು ತಯಾರಿಸಿದ ಈ ಸ್ಟೆಲ್ತ್ ವಿಮಾನವು B-1 ಮತ್ತು B-2 ಸ್ಥಾನಗಳನ್ನು ತುಂಬಲಿದೆ. ಈ ಯುದ್ಧ ವಿಮಾನ ಶುಕ್ರವಾರ ಅನಾವರಣಗೊಳ್ಳಲಿದೆ. ಇದೊಂದು ಅತ್ಯಂತ ಸುಧಾರಿತ ಮಿಲಿಟರಿ ವಿಮಾನವೆಂದು ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯ ವೆಬ್‌ಸೈಟ್ ಪ್ರಕಾರ, ಕ್ಯಾಲಿಫೋರ್ನಿಯಾದ ಪಾಮ್‌ಡೇಲ್‌ನಲ್ಲಿರುವ ಸಂಕೀರ್ಣದಲ್ಲಿ ಆರು B-21 ಬಾಂಬರ್‌ಗಳನ್ನು ನಿರ್ಮಿಸಲಾಗುತ್ತಿದೆ. ವಿಶ್ವದ ಅತ್ಯಾಧುನಿಕ ಸ್ಟ್ರೈಕ್ ವಿಮಾನವನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು 2015 ರಲ್ಲಿ ನಾರ್ತ್‌ರಾಪ್‌ಗೆ ಗುತ್ತಿಗೆ ನೀಡಲಾಗಿತ್ತು.ವಿಮಾನವನ್ನು ದೀರ್ಘ-ಶ್ರೇಣಿಯ ಸಾಂಪ್ರದಾಯಿಕ ಮತ್ತು ಪರಮಾಣು ಕಾರ್ಯಾಚರಣೆಗಳನ್ನು ನಿರ್ವಹಿಸುವಂತೆ ತಯಾರು ಮಾಡಲಾಗಿದೆ. ಪ್ರತಿ ವಿಮಾನದ ಅಂದಾಜು ವೆಚ್ಚ 2 ಬಿಲಿಯನ್ (16,200 ಕೋಟಿ ರೂಪಾಯಿ) ಯುಎಸ್ ಡಾಲರ್ಗಳಾಗಿದೆ. ಈ ವಿಮಾನವು 2023 ರ ಆರಂಭದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಆರನೇ ತಲೆಮಾರಿನ ವಿಮಾನವು ಸ್ಟೆಲ್ತ್ ತಂತ್ರಜ್ಞಾನ, ಸುಧಾರಿತ ನೆಟ್‌ವರ್ಕಿಂಗ್ ಸಾಮರ್ಥ್ಯಗಳು ಮತ್ತು ಓಪನ್ ಸಿಸ್ಟಮ್ ಆರ್ಕಿಟೆಕ್ಚರ್ ಹೊಂದಿದೆ. B-21 ಅನ್ನು ಉನ್ನತ ಮಟ್ಟದ ಬೆದರಿಕೆಗೆ ತಡೆಯೊಡ್ಡುವ ಪರಿಸರಕ್ಕೆ ಹೊಂದುವಂತೆ ಮಾಡಲಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಇನ್ನು ಮುಂದೆ ವರ್ತುಲ ರಸ್ತೆಯಲ್ಲಿ ಝಗಮಗಿಸಲಿವೆ ವಿದ್ಯುತ್ ದೀಪಗಳು