ಸ್ಟಾರ್ಟ್ ಅಪ್ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್‌ನಿಂದ ಅಭಿವೃದ್ಧಿ
ಚೆನ್ನೈ: ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪೆನಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯಾನ ಕೇಂದ್ರದಿಂದ ಬೆಳಿಗ್ಗೆ ೧೧.೩೦ರ ಸುಮಾರಿಗೆ ಉಡಾವಣೆಗೊಂಡಿದೆ.
ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೊ) ಮತ್ತು ಹೈದರಾಬಾದ್‌ನ ಅಂತರಿಕ್ಷ ತಾಂತ್ರಿಕ ಕಂಪೆನಿ ಸ್ಕೈರೂಟ್ ಏರೋಸ್ಪೇಸ್ ಮಿಷನ್ ಪ್ರಾರಂಭ ಯಶಸ್ವಿಯಾಗಿದೆ ಎಂದು ಖುಷಿಯಿಂದ ಹೇಳಿಕೊಂಡಿವೆ. ರಾಕೆಟ್ ವ್ಯಾಕ್ ೫ ರ ಹೈಪರ್ಸಾನಿಕ್ ವೇಗದಲ್ಲಿ ೮೯.೫ ಕಿ.ಮೀ. ಅಪೋಜಿಯನ್ನು ಸಾಧಿಸಿತು. ವಿಕ್ರಮ್-ಎಸ್ ೧೫೫ ಸೆಕೆಂಡ್‌ಗಳಲ್ಲಿ ಅಂತರಿಕ್ಷವನ್ನು ತಲುಪಿತು.
ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್-ಎಸ್ ಎಂದು ಹೆಸರಿಡಲಾಗಿದೆ. ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟ್ ಅಪ್ ಸ್ಕೈರೂಟ್ ಏರೋಸ್ಪೇಸ್ ಚೊಚ್ಚಲ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲುಂದ ಮೊದಲ ಸೇರ್ಪಡೆಯಾಗುವ ಮೂಲಕ ಇತಿಹಾಸ ಬರೆದಿದೆ.
ಈ ಮಿಷನ್‌ಗೆ ‘ಪ್ರಾರಂಭ’ಎಂದು ಹೆಸರಿಡಲಾಗಿದೆ. ಸ್ಪೇಸ್ ಕಿಡ್ಸ್ ಇಂಡಿಯಾ, ಎನ್-ಸ್ಪೇಸ್ ಟೆಕ್ ಇಂಡಿಯಾ ಮತ್ತು ಅರ್ಮೇನಿಯಾದ ಬಜೂಮ್ಕ್‌ನ ತಲಾ ಒಂದು ಮಾದರಿಯನ್ನು ಈ ರಾಕೆಟ್ ಕೊಂಡೊಯ್ದಿದೆ.
ಇನ್-ಸ್ಪೇಸ್, ಅಂತರಿಕ್ಷ ಇಲಾಖೆಯ ಅಧ್ಯಕ್ಷ ಪವನ್ ಕೆ ಗೋಯೆಂಕ, ಎಲ್ಲಾ ವ್ಯವಸ್ಥೆಗಳು ಯೋಜನೆ ಪ್ರಕಾರವೇ ಕೆಲಸ ಮಾಡಿದೆ. ಸ್ಕೈರೂಟ್ ಮತ್ತು ಇಸ್ರೋದ ಎಲ್ಲಾ ಕೇಂದ್ರಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಅಂತರಿಕ್ಷ ವಲಯದಲ್ಲಿ ಇದು ಹೊಸ ಶಕೆ ಆರಂಭ ಎಂದು ಹೇಳಿದ್ದಾರೆ.
ಉಡಾವಣೆಗೆ ಸಾಕ್ಷಿಯಾದ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತರಿಕ್ಷ ವಲಯದಲ್ಲಿ ಸುಧಾರಣೆ ತಂದು ಅಂತರಿಕ್ಷ ವಲಯದ ಆರಂಭಕ್ಕೆ ಖಾಸಗಿ ಸಂಸ್ಥೆಗಳಿಗೆ ವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು.
ಪ್ರಾರಂಭ್ ಮಿಷನ್ ನವ ಭಾರತವನ್ನು ಸಂಕೇತಿಸುತ್ತದೆ ಎಂದು ಕೈರೂಟ್ ಸಹ ಸಂಸ್ಥಾಪಕ ಪವನ್ ಚಂದನ ಹೇಳಿದ್ದಾರೆ. ಇದು ನಮ್ಮ ಪ್ರಾರಂಭದ ಒಂದು ಸಣ್ಣ ಹೆಜ್ಜೆ, ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲಿದೆ. ಸ್ಕೈರೂಟ್ ತಂಡವನ್ನು ಕೈುಂಲ್ಲಿ ಹಿಡಿದಿದ್ದಕ್ಕಾಗಿ ಅವರು ಇಸ್ರೊ ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದರು.
೨೦೧೮ರಲ್ಲಿ ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನ ಮತ್ತು ನಾಗಾ ಭಾರತ್ ಡಾಕಾ ಅವರು ಸ್ಥಾಪಿಸಿದ ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್, ಇಂಗಾಲದ ಸಂಯೋಜಿತ ರಚನೆಗಳು ಮತ್ತು ೩ಡಿ-ಮುದ್ರಿತ ಘಟಕಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಎರಡು ವರ್ಷಗಳಲ್ಲಿ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಆಲ್-ಕಾರ್ಬನ್ ಫೈಬರ್ ಕೋರ್ ರಚನೆಯನ್ನು ಹೊಂದಿದೆ.
ಪ್ರಾರಂಭ
ಮಿಷ್‌ನ್‌ನ ಹೆಸರು
ಬೆಳಿಗ್ಗೆ ೧೧.೩೦
ರಾಕೆಟ್ ವಿಕ್ರಮ್- ಎಸ್ ಉಡಾವಣೆ
೧೫೫
ಸೆಕೆಂಡ್‌ಗಳಲ್ಲಿ ಅಂತರಿಕ್ಷಕ್ಕೆ ಸೇರ್ಪಡೆ
೮೯.೫
ಕಿ.ಮೀ. ರಾಕೆಟ್ ವ್ಯಾಕ್ ೫ರ ಹೈಪರ್ಸಾನಿಕ್ ವೇಗ