Mysore
25
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಭೂಮಿಗೆ ಬಿದ್ದ 38 ವರ್ಷದ ಹಳೇ ಉಪಗ್ರಹ

ಕೇಪ್ ಕ್ಯಾನವೆರಲ್ (ಅಮೆರಿಕ): 38 ವರ್ಷ ಹಳೆಯದಾದ ನಾಸಾ ಉಪಗ್ರಹವೊಂದು ಭಾನುವಾರ ರಾತ್ರಿ ಆಗಸದಿಂದ ಭೂಮಿಗೆ ಬಿದ್ದಿದೆ.
ಉಪಗ್ರಹ ಭೂಮಿಗೆ ಬೀಳುತ್ತಿದ್ದರೂ ಅದರಿಂದ ಅಪಾಯದ ಸಾಧ್ಯತೆ ತೀರ ಕಡಿಮೆ ಎಂದು ನಾಸಾ ಹೇಳಿದೆ. ೨,೪೫೦ ಕೆ.ಜಿ ತೂಕದ ಉಪಗ್ರಹವು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಬಹುಪಾಲು ಉರಿದುಹೋಗಲಿದೆ. ಆದರೂ, ಕೆಲವು ತುಣುಕುಗಳಷ್ಟೇ ಭೂಮಿಗೆ ಬೀಳಲಿವೆ. ಇದರಿಂದ ಅಪಾಯವೇನಿಲ್ಲ ಎಂದು ನಾಸಾ ಹೇಳಿದೆ. ಅವಶೇಷಗಳು ಭೂಮಿಗೆ ಬೀಳುತ್ತಿರುವುದರಿಂದ 9,400 ಜನರಲ್ಲಿ ಯಾರಿಗಾದರೂ ಒಬ್ಬರಿಗೆ ತೊಂದರೆಯಾಗಬಹುದು ಎಂದು ನಾಸಾ ತಿಳಿಸಿದೆ. ಇಆರ್‌ಬಿಎಸ್ ಎಂದು ಕರೆಯಲಾಗುವ ಉಪಗ್ರಹವನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್ ಮೂಲಕ ನಭಕ್ಕೆ ಹಾರಿಸಲಾಗಿತ್ತು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!