-ಆರ್.ಟಿ.ವಿಠ್ಠಲಮೂರ್ತಿ
ಕೇಂದ್ರ ಸರ್ಕಾರ ಕರ್ನಾಟಕದಂತಹ ರಾಜ್ಯಗಳಿಂದ ಹೆಚ್ಚು ಪಾಲನ್ನು ಪಡೆದು ಪರಿಸ್ಥಿತಿಯನ್ನು ಹೊಂದಿಸುತ್ತಿದೆ. ಅದು ಪ್ರತಿ ವರ್ಷ ರಾಜ್ಯದಿಂದ ಜಿಎಸ್‌ಟಿ, ಆದಾಯ ತೆರಿಗೆ ಮತ್ತಿತರ ಬಾಬ್ತುಗಳ ಮೂಲಕ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ. ಆದರೆ ಅದರಲ್ಲಿ ಅರ್ಧದಷ್ಟು ಹಣವನ್ನೂ ಅದು ಕರ್ನಾಟಕಕ್ಕೆ ಮರಳಿಸುವುದಿಲ್ಲ. ಕೇಂದ್ರ ಸರ್ಕಾರದ ಈ ನೀತಿಯನ್ನು ಪ್ರಬಲವಾಗಿ ವಿರೋಧಿಸುವ, ಆ ಮೂಲಕ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಹಣದಲ್ಲಿ ನಮಗೆ ಹೆಚ್ಚಿನ ಪಾಲು ಬೇಕು ಎಂದು ಕೇಳುವ ಧಾಡಸಿತನ ರಾಜ್ಯ ಸರ್ಕಾರಕ್ಕಿರಬೇಕು. ದುರಂತವೆಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೇಂದ್ರ ಸರ್ಕಾರದ ಈ ನೀತಿಯನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸಿರಲಿಲ್ಲ. ಈಗ ಬಿಡಿ,ರಾಜ್ಯ ಸರ್ಕಾರಕ್ಕೆ ಹೆಚ್ಚು ಪಾಲು ಬೇಕು ಅಂತ ಕೇಳುವ ಶಕ್ತಿ ರಾಜ್ಯದ ಬಿಜೆಪಿ ಸರ್ಕಾರಕ್ಕಿಲ್ಲ.
ಕರ್ನಾಟಕದ ರಾಜಕೀಯ ಅತಂತ್ರ ಪರಿಸ್ಥಿತಿಗೆ ತಲುಪುತ್ತಿರುವ ಈ ಸನ್ನಿವೇಶದಲ್ಲಿ ಒಂದು ಗಂಭೀರ ಬೆಳವಣಿಗೆಯತ್ತ ಕಣ್ಣು ಹಾಯಿಸಬೇಕಿದೆ. ಈ ಬೆಳವಣಿಗೆಗೆ ಕರ್ನಾಟಕದ ಅತಂತ್ರ ರಾಜಕೀಯ ಪರಿಸ್ಥಿತಿ ಕೂಡಾ ಒಂದು ಕಾರಣ ಅನ್ನುವುದು ವಿಪರ್ಯಾಸ.
ಅಂದ ಹಾಗೆ ಈ ಬೆಳವಣಿಗೆಯ ಕೇಂದ್ರ ಬಿಂದು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ. ದೇಶದ ಆರ್ಥಿಕ ಕಟ್ಟಡವನ್ನು ಭದ್ರಗೊಳಿಸಿದ ಐದು ರಾಜ್ಯಗಳಲ್ಲಿ ಒಂದಾದ ಕರ್ನಾಟಕ ಈಗ ತಾನೇ ದು:ಸ್ಥಿತಿಗೆ ಸಿಲುಕಿಕೊಳ್ಳುತ್ತಿದೆ. ಇದಕ್ಕೊಂದು ಉದಾಹರಣೆ ನೀಡಬೇಕು ಎಂದರೆ ಇತ್ತೀಚಿನ ದಿನಗಳಲ್ಲಿ ತನ್ನ ಹಣಕಾಸಿನ ಅಗತ್ಯಕ್ಕಾಗಿ ರಾಜ್ಯ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ? ಅಂತ ನೋಡಬೇಕು.
ಅಂದ ಹಾಗೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚೆಗೆ ಸಮಿತಿಯೊಂದನ್ನು ರಚಿಸಿ, ಸಾರ್ವಜನಿಕ ಉದ್ದಿಮೆಗಳ ಆರ್ಥಿಕ ಪರಿಸ್ಥಿತಿ, ಅವುಗಳಿಗಿರುವ ಆಸ್ತಿಯ ವಿವರ ನೀಡುವಂತೆ ಸೂಚಿಸಿತು.
ಈ ಸಮಿತಿ ವಿವರವಾದ ಅಧ್ಯಯನ ನಡೆಸಿ ಕರ್ನಾಟಕದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಪೈಕಿ ಹದಿನೈದಕ್ಕೂ ಹೆಚ್ಚು ಉದ್ದಿಮೆಗಳನ್ನು ಖಾಸಗಿಯವರಿಗೆ ವಹಿಸಿಕೊಡಬಹುದು ಎಂದು ಹೇಳಿತು. ಅದು ಯಾವಾಗ ಈ ಶಿಫಾರಸು ಮಾಡಿತೋ? ಇದಾದ ನಂತರ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಐದು ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲು ಸಜ್ಜಾಯಿತು. ಅಷ್ಟೇ ಅಲ್ಲ, ಈ ಪೈಕಿ ಎರಡು ಉದ್ದಿಮೆಗಳನ್ನು ಈ ವರ್ಷವೇ ಖಾಸಗಿಯವರಿಗೆ ವಹಿಸಿಕೊಡಲು ನಿರ್ಧರಿಸಿತು. ಗಮನಿಸಬೇಕಾದ ಸಂಗತಿಯೆಂದರೆ ಅದು ಖಾಸಗಿಯವರಿಗೆ ಬಿಟ್ಟು ಕೊಡಲು ನಿರ್ಧರಿಸಿರುವ ಐದು ಉದ್ದಿಮೆಗಳ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಮಿ ಮತ್ತಿತರ ಆಸ್ತಿಗಳಿವೆ.
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಕೂಡಾ ಈ ಐದು ಉದ್ದಿಮೆಗಳ ಪೈಕಿ ಒಂದು. ಇಂತಹ ಅಪಾರ ಪ್ರಮಾಣದ ಆಸ್ತಿ ಹೊಂದಿರುವ ಉದ್ದಿಮೆಯನ್ನು ಖಾಸಗಿಯವರಿಗೆ ಮೂವತ್ತು ವರ್ಷಕ್ಕೋ,ಇನ್ನೆಷ್ಟೊ ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಕೊಡಲಾಯಿತು ಎಂದುಕೊಳ್ಳಿ. ಇದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಸಿಗುವ ಆದಾಯ ಎಷ್ಟು? ಸದರಿ ಉದ್ದಿಮೆಯಲ್ಲಿ ಉತ್ಪಾದನೆಯಾಗುವ ಸೋಪು, ಮತ್ತಿತರ ಸಾಮಾಗ್ರಿಗಳ ಮಾರಾಟದಿಂದ ಬರುವ ಲಾಭದ ಪೈಕಿ ಇಂತಿಷ್ಟು ಪ್ರಮಾಣದ ಪಾಲು ದೊರೆಯುತ್ತದೆ.
ಆದರೆ ಸರ್ಕಾರದಿಂದ ಇದನ್ನು ಗುತ್ತಿಗೆಗೆ ಪಡೆದ ಖಾಸಗಿಯವರು ಈಗಿರುವ. ಉದ್ದಿಮೆಯನ್ನು ಹೊರತು ಪಡಿಸಿ, ಬೇರೆ ಹಲವು ಉದ್ದಿಮೆಗಳು ತಲೆ ಎತ್ತುವಂತೆ ನೀಡಿ ಕೊಳ್ಳುತ್ತಾರೆ. ಅಂದರೆ ಅವರಿಗೆ ಹೊಸ ಉದ್ದಿಮೆ ಸ್ಥಾಪಿಸಲು ಬಂಡವಾಳವೇ ಇಲ್ಲದೆ ಭೂಮಿ ದೊರಕಿದಂತಾಯಿತು. ನೆಪ ಮಾತ್ರದ ಖರ್ಚಿನಲ್ಲಿ ಬಂಪರ್ ಲಾಭ ಗಳಿಸುವ ಅವಕಾಶ ಸಿಕ್ಕಂತಾಯಿತು. ಇದು ಸೋಪ್ಸ್ ಅಂಡ್ ಡಿಟರ್ಜೆಂಟ್ ಉದ್ದಿಮೆಯೊಂದರ ಕತೆಯಲ್ಲ.ಈಗ ಕಾಸಗಿಯವರಿಗೆ ವರ್ಗಾವಣೆ ಆಗುವ ಎಲ್ಲ ಉದ್ದಿಮೆಗಳ ಸ್ಥಿತಿ. ಅಂದ ಹಾಗೆ ಈ ರೀತಿ ಸರ್ಕಾರದ ಆಸ್ತಿಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಸರ್ಕಾರ ಏಕೆ ಮುಂದಾಗುತ್ತಿದೆ ಎಂದರೆ, ಅದಕ್ಕೆ ತನ್ನ ವಾರ್ಷಿಕ ಬಜೆಟ್ ಗೆ ಬೇಕಾದ ಹಣವನ್ನು ಹೊಂದಿಸುವುದು ಕಷ್ಟದ ಕೆಲಸವಾಗುತ್ತಿದೆ.
ಜಿಎಸ್‌ಟಿ ಬಂದ ನಂತರ ರಾಜ್ಯದಲ್ಲಿ ಸಂಗ್ರಹವಾಗುವ ಜಿಎಸ್‌ಟಿ ಬಾಬ್ತಿನಲ್ಲಿ ಅದಕ್ಕೆ ಪರಿಹಾರ ಅಂತ ಸಿಗುತ್ತಿತ್ತು.
ಆದರೆ ಬರುವ ವರ್ಷದಿಂದ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಬಾಬ್ತಿನಲ್ಲಿ ಪರಿಹಾರ ಸಿಗುವುದಿಲ್ಲ.
ಈಗಲೇ ತನ್ನ ಬಜೆಟ್ ಅನ್ನು ಸರಿದೂಗಿಸಲು ವಾರ್ಷಿಕ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳಿಗಿಂತ ಅಧಿಕ ಸಾಲ ಮಾಡುತ್ತಿರುವ ಸರ್ಕಾರ ಈ ಕೊರತೆಯಿಂದಾಗಿ ಮುಂದಿನ ವರ್ಷ ತೊಂಭತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ಮಾಡುವ ಅನಿವಾರ್ಯತೆಗೆ ಸಿಲುಕುತ್ತದೆ.
ಈಗಾಗಲೇ ಸರ್ಕಾರ ಮಾಡಿರುವ ಸಾಲದ ಬಾಬ್ತು ಐದು ಲಕ್ಷ ಕೋಟಿ ರೂಪಾಯಿಗಳ ಗಡಿಗೆ ತಲುಪಿದೆ. ಅರ್ಥಾತ್, ಈಗಾಗಲೇ ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ ಪಾವತಿಸಲು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.
ನಾಳೆ ಈ ಸಾಲದ ಪ್ರಮಾಣ ಬೆಳೆಯುತ್ತಾ ಹೋದರೆ ಇದನ್ನು ತೀರಿಸುವುದು ಹಾಗಿರಲಿ, ಅದರ ಮೇಲಿನ ಅಸಲು, ಬಡ್ಡಿಯ ವಾರ್ಷಿಕ ಕಂತು ಕಟ್ಟಲೂ ಅದು ಪರದಾಡಬೇಕಾಗುತ್ತದೆ.
ಹೋಗಲಿ, ಇದನ್ನು ಬೇರೆ ಮೂಲಗಳ ಸಹಕಾರದಿಂದ ಬಗೆಹರಿಸಬಹುದು ಎಂದರೆ ರಾಜ್ಯ ಸರ್ಕಾರಕ್ಕೆ ಹೊಸ ಮೂಲಗಳು ಅಂತಿಲ್ಲ.
ಗಣಿಗಾರಿಕೆಯ ಆದಾಯ ಪಡೆಯಲು ಅವಕಾಶವಿದ್ದಾಗ ಹಿಂದಿನ ಸರ್ಕಾರಗಳು ಆ ಕೆಲಸ ಮಾಡಲಿಲ್ಲ. ಹೀಗಾಗಿ ಖಾಸಗಿ ವ್ಯಕ್ತಿಗಳು ಗಣಿಗಾರಿಕೆಯ ಮೇಲೆ ನಿಯಂತ್ರಣ ಸಾಧಿಸಿ ಲಕ್ಷಾಂತರ ಕೋಟಿ ರೂಪಾಯಿಗಳ ಆದಾಯ ಗಳಿಸುವುದನ್ನು ನೋಡಬೇಕಾಯಿತು.
ಹೀಗಾಗಿ ಈಗ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಿ ಆದಾಯ ತಂದುಕೊಳ್ಳಬಹುದು ಅಂತ ಸರ್ಕಾರದ ವರಿಷ್ಟರಿಗೆ ಅನ್ನಿಸಿದರೂ ಜನ ಅದನ್ನು ಒಪ್ಪುವುದಿಲ್ಲ.
ಹೀಗಾಗಿ ಬೇರೆ ದಾರಿ ಕಾಣದೆ ಸರ್ಕಾರ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಹೊರಟಿದೆ.
ಹೀಗೆ ಸಾರ್ವಜನಿಕ ಉದ್ದಿಮೆಗಳನ್ನು,ಆ ಮೂಲಕ ಸರ್ಕಾರದ ಆಸ್ತಿಗಳನ್ನು ಪರಭಾರೆ ಮಾಡುತ್ತಾ ಕೆಲ ಕಾಲ ಸರ್ಕಾರದ ಬಜೆಟ್ ಅನ್ನು ಸರಿಹೊಂದಿಸಬಹುದು. ಆದರೆ ಇರುವ ಆಸ್ತಿಗಳನ್ನು ಪರಭಾರೆ ಮಾಡಿದ ನಂತರ ಎದುರಾಗುವ ಪರಿಸ್ಥಿತಿ ಏನು?
ಮುಂದಿನ ದಿನಗಳಲ್ಲಿ ತನ್ನ ಬಜೆಟ್ ಅನ್ನು ಸರಿಹೊಂದಿಸಲು ಅದಕ್ಕೆ ಸಾಲ ಬೇಕು ಎಂದರೆ ಕೊಡುವವರು ಯಾರು? ಅಡಮಾನಕ್ಕೆ ಅಂತ ಆಸ್ತಿಯೇ ಇಲ್ಲದಿದ್ದರೆ ಅದು ಪಡೆಯುವ ಸಾಲಕ್ಕೆ ಪ್ರತಿಯಾಗಿ ಏನನ್ನು ತೋರಿಸುತ್ತದೆ? ಅರ್ಥಾತ್, ಮುಂದಿನ ದಿನಗಳಲ್ಲಿ ಮಹಾನ್ ವಿಪ್ಲವಗಳನ್ನು ಎದುರಿಸಲು ಸರ್ಕಾರ ಹೀಗಿರುವಾಗ ಇನ್ನಷ್ಟು ಭಾರವನ್ನು ಹೊರಿಸುವುದು ಎಂದರೆ ಅವರು ದಂಗೆ ಏಳಲು ಪ್ರೇರೇಪಿಸುವುದು ಅಂತಲೇ ಅರ್ಥ. ಹೀಗಾಗಿ ಮುಂದಿನ ಪರಿಸ್ಥಿತಿ ಏನು ಅನ್ನುವ ವಿಷಯದಲ್ಲಿ ಎಲ್ಲವೂ ಅಯೋಮಯ.
ಅರ್ಥಾತ್, ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ದಿವಾಳಿಯಾದ ಶ್ರೀಲಂಕಾ, ಪಾಕಿಸ್ತಾನದ ದಾರಿಯಲ್ಲಿ ನಮ್ಮ ಆರ್ಥಿಕತೆಯೂ ಸಾಗುತ್ತಿದೆ ಅಂತ ತಜ್ಞರು ಆತಂಕಪಡುತ್ತಿದ್ದಾರೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿರುವ ಆಡಳಿತಾರೂಢ ಬಿಜೆಪಿಗೂ ಅದು ಬೇಕಾಗಿಲ್ಲ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಅದರ ಗೊಡವೆ ಬೇಕಾಗಿಲ್ಲ.
ಪರಿಣಾಮ? ದೇಶದ ಆಧಾರ ಸ್ತಂಭಗಳಲ್ಲೊಂದು ಎಂದು ಬಣ್ಣಿಸಲ್ಪಡುತ್ತಿರುವ ಕರ್ನಾಟಕದ ಆರ್ಥಿಕತೆ ನೆಲ ಕಚ್ಚುತ್ತಲೇ ಹೋಗುತ್ತಿದೆ.
ಇದನ್ನು ದುರಂತ ಅನ್ನದೆ ಬೇರೆ ದಾರಿ ಇಲ್ಲ!ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಅಂದ ಹಾಗೆ ಈಗ ಪ್ರತಿ ವರ್ಷ ಬದ್ಧತಾ ವೆಚ್ಚ ಮಾಡಲೂ ಅದು ಸಾಲ ಮಾಡುವ ಪರಿಸ್ಥಿತಿ ಇದೆ. ಅಂದರೆ ಸರ್ಕಾರಿ ನೌಕರರ ವೇತನದಿಂದ ಹಿಡಿದು ಹಲವು ವೆಚ್ಚಗಳಿಗೆ ಹಣ ಒದಗಿಸುವುದು ಅದರ ಬದ್ಧತೆ. ಆದರೆ ಯಾವಾಗ ಈ ಬದ್ಧತೆಯನ್ನು ಈಡೇರಿಸುವುದೂ ಅದಕ್ಕೆ ಕಷ್ಟವಾಗುತ್ತದೋ? ಆಗ ಸರ್ಕಾರ ಎಂಬ ವ್ಯವಸ್ಥೆ ದುರ್ಬಲವಾಗುತ್ತದೆ.
ಇಂತದೇ ದು:ಸ್ಥಿತಿಯಲ್ಲಿದ್ದರೂ ಕೇಂದ್ರ ಸರ್ಕಾರ ಕರ್ನಾಟಕದಂತಹ ರಾಜ್ಯಗಳಿಂದ ಹೆಚ್ಚು ಪಾಲನ್ನು ಪಡೆದು ಪರಿಸ್ಥಿತಿಯನ್ನು ಹೊಂದಿಸುತ್ತಿದೆ.
ಅದು ಪ್ರತಿ ವರ್ಷ ರಾಜ್ಯದಿಂದ ಜಿಎಸ್‌ಟಿ, ಆದಾಯ ತೆರಿಗೆ ಮತ್ತಿತರ ಬಾಬ್ತುಗಳ ಮೂಲಕ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ. ಆದರೆ ಅದರಲ್ಲಿ ಅರ್ಧದಷ್ಟು ಹಣವನ್ನೂ ಅದು ಕರ್ನಾಟಕಕ್ಕೆ ಮರಳಿಸುವುದಿಲ್ಲ.
ಕೇಂದ್ರ ಸರ್ಕಾರದ ಈ ನೀತಿಯನ್ನು ಪ್ರಬಲವಾಗಿ ವಿರೋಧಿಸುವ, ಆ ಮೂಲಕ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಹಣದಲ್ಲಿ ನಮಗೆ ಹೆಚ್ಚಿನ ಪಾಲು ಬೇಕು ಎಂದು ಕೇಳುವ ಧಾಡಸಿತನ ರಾಜ್ಯ ಸರ್ಕಾರಕ್ಕಿರಬೇಕು.
ದುರಂತವೆಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೇಂದ್ರ ಸರ್ಕಾರದ ಈ ನೀತಿಯನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸಿರಲಿಲ್ಲ. ಈಗ ಬಿಡಿ,ರಾಜ್ಯ ಸರ್ಕಾರಕ್ಕೆ ಹೆಚ್ಚು ಪಾಲು ಬೇಕು ಅಂತ ಕೇಳುವ ಶಕ್ತಿ ರಾಜ್ಯದ ಬಿಜೆಪಿ ಸರ್ಕಾರಕ್ಕಿಲ್ಲ.
ಹೀಗಾಗಿ ಪರಿಸ್ಥಿತಿಯನ್ನು ಸರಿದೂಗಿಸಬೇಕು ಎಂದರೆ ರಾಜ್ಯ ಸರ್ಕಾರವೂ ಜನರ ಮೇಲೆ ಭಾರ ಹೊರಿಸಬೇಕು.
ಆದರೆ ಜನ ಹೊತ್ತ ಭಾರ ಈಗಲೇ ಮಿತಿ ಮೀರಿದ್ದು ಬಡ, ಮಧ್ಯಮ ವರ್ಗದ ಜನ ಬದುಕಲು ಪರದಾಡಬೇಕಾದ ಸ್ಥಿತಿ ಇದೆ.