Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಶೀಘ್ರವೇ ಬಿಡುಗಡೆಯಾಗಲಿದೆ ಪೆನ್ ಡ್ರೈವ್ ಬ್ರದರ್ ಚಿತ್ರ : ಎಚ್.ಡಿ.ಕೆ ವಿರುದ್ಧ ಮತ್ತೊಂದು ಪೋಸ್ಟರ್ ವಾರ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಪೋಸ್ಟರ್ ವಾರ್ ಮುಂದುವರಿದಿದೆ.

ಕರೆಂಟ್ ಕಳ್ಳ ಖ್ಯಾತಿಯ ಎಚ್.ಡಿ.ಕೆ ನಿರ್ಮಾಣದ ‘ಪೆನ್ ಡ್ರೈವ್ ಬ್ರದರ್’ ಚಿತ್ರ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಅಂಟಿಸುವ ಮೂಲಕ ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಕೆಣಕಿದಂತಾಗಿದೆ.

ಬೆಂಗಳೂರಿನ ರಾಜಾಜಿನಗರ ರಸ್ತೆ, ಶಿವಾನಂದ ಸರ್ಕಲ್,ಶೇಷಾದ್ರಿಪುರಂ ರಸ್ತೆ, ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪೆನ್ ಡ್ರೈವ್ ಬ್ರದರ್ ಚಿತ್ರ ಬಿಡುಗಡೆ ಪೋಸ್ಟರ್ ಅಂಟಿಸಲಾಗಿದೆ. ಇದು ಮತ್ತೊಂದು ಪೋಸ್ಟರ್ ವಾರ್ ಗೆ ಮುನ್ನುಡಿ ಬರೆದಿದೆ. ಈ ಪೋಸ್ಟರನ್ನು ಯಾರು ಅಂಟಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಇನ್ನು ಈ ಪೋಸ್ಟರ್ ನಲ್ಲಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ. *ರಾಧಾ* *ಮಾರ*  * ಬ್ಲೂ ಬಾಯ್ಸ್ * ಚಿತ್ರ ಮಂದಿರಗಳಲ್ಲಿ. 68.000 ರೂ. ವೆಚ್ಚದಲ್ಲಿ ಪ್ರಾಮಾಣಿಕ ಕರೆಂಟ್ ಕಳ್ಳರ ನಿರ್ದೇಶನದಲ್ಲಿ ತಯಾರಾಗಿರುವ ಕರೆಂಟ್ ಕಳ್ಳ ಖ್ಯಾತಿಯ ಎಚ್. ಡಿ.ಕೆ ನಿರ್ಮಾಣದ ‘ಪೆನ್ ಡ್ರೈವ್ ಬ್ರದರ್’

ಬರೀ ಟೀಸರ್ ಗೆ ಇಷ್ಟೊಂದು ಟೆನ್ಶನ್ ಆದ್ರೆ ಹೆಂಗೆ ? ಪಿಚ್ಚರ್ ಇನ್ನೂ ಬಾಕಿ ಇದೆ… ಎಂದು ಬರೆಯಲಾಗಿದೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜೆಪಿ ನಗರದ ನಿವಾಸಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯುತ್ ದೀಪ ಅಲಂಕಾರ ಮಾಡಲು ಬೀದಿ ಬದಿಯ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.

ಇನ್ನು ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿ ಕೊಂಡಿದ್ದರ ಕುರಿತು ಕಾಂಗ್ರೆಸ್ ಎಚ್ ಡಿಕೆ ವಿರುದ್ಧ ದೊಡ್ಡಮಟ್ಟದಲ್ಲಿಯೇ ಟಿಕಾ ಪ್ರಹಾರ ಮಾಡಿತ್ತು. ಅಲ್ಲದೇ ಕುಮಾರಸ್ವಾಮಿ ಅವರನ್ನು ಕರೆಂಟ್ ಕಳ್ಳ ಎಂದು ಪೋಸ್ಟರ್ ಕೂಡ ಅಂಟಿಸಲಾಗಿತ್ತು.ಈ ಕುರಿತು ಕುಮಾರಸ್ವಾಮಿ ಅವರು ಕೂಡ ಟಾಂಗ್ ನೀಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!