ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನಾಂಕ ಸಮೀಪಿಸುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಕ್ಸ್ ಮಾಧ್ಯಮದಲ್ಲಿ ಕನ್ನಡಕ್ಕೆಂದು ಪ್ರತ್ಯೇಕ ಖಾತೆಯನ್ನು ತೆರೆದಿದ್ದಾರೆ. ʼನರೇಂದ್ರ ಮೋದಿ ಕನ್ನಡʼ ಎಂಬ ಹೆಸರಿನಡಿಯಲ್ಲಿ ಈ ಖಾತೆಯನ್ನು ತೆರೆದಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ ಹಾಗೂ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನರನ್ನು ತಲುಪುವ ಉದ್ದೇಶದೊಂದಿಗೆ ಮೋದಿ ಅವರ ಪ್ರತ್ಯೇಕ ಕನ್ನಡ ಖಾತೆಯನ್ನು ಆರಂಭಿಸಲಾಗಿದೆ.