ಮೈಸೂರು: ಪೊಲೀಸ್ ಠಾಣೆಗಳು ಮಹಿಳೆಯರಿಗೆ ತವರು ಮನೆ ಇದ್ದಂತೆ. ಪೊಲೀಸ್ ಠಾಣೆ ಬಗ್ಗೆ ಭಯ ಪಡಬೇಡಿ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿಕೆ.
ದೇಶದ ಕಾನೂನು ಇರುವುದೇ ಮಹಿಳೆಯರಿಗಾಗಿ. ಬಹುತೇಕ ಮಂದಿ ಪೊಲೀಸ್ ಠಾಣೆ ಎಂದರೆ ಹೆದರಿಕೆ ಇದೆ. ಹೆಣ್ಣಿಗೆ ಅತ್ಯಾಚಾರ ಆದ್ರೆ ಪೊಲೀಸ್ ಠಾಣೆಗೆ ಹೋಗಲು ಹೆದರುತ್ತಾರೆ. ಪೊಲೀಸ್ ಠಾಣೆಗಳಿರುವುದು ಮಹಿಳೆಯರ ರಕ್ಷಣೆಗೆ. ಅನ್ಯಾಯ, ಅತ್ಯಾಚಾರವಾದಾಗ ಹೆಣ್ಣಿನ ಪರ ಸಮಾಜ ನಿಲ್ಲಬೇಕು. ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಗುಣ ಹೆಣ್ಣು ಬೆಳೆಸಿಕೊಳ್ಳಬೇಕು.
ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ಇದನ್ನೇ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಹೇಳಿದ್ದಾರೆ.
ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. ಹೆಣ್ಣು ಮತ್ತು ಗಂಡಿಗೆ ಪ್ರತ್ಯೇಕ ವೃತ್ತಿಗಳೆಂದು ಇಲ್ಲ. ಎಲ್ಲಾ ಕೆಲಸವನ್ನು ಎಲ್ಲರೂ ಮಾಡಲೇಬೇಕು. ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಬೇಕು. ಸಮಾಜದಲ್ಲಿ ಹೆಣ್ಣು ಗಟ್ಟಿಯಾಗಿ ನಿಲ್ಲಬೇಕು ಎಂದರೆ ದುಡ್ಡು ಬಹಳ ಮುಖ್ಯ. ಎಲ್ಲಾ ರಂಗದಲ್ಲೂ ಮಹಿಳೆಯರು ದೈರ್ಯದಿಂದ ಪ್ರವೇಶಿಸಬೇಕು