Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಭಾರತದಲ್ಲಿ ಚಿರತೆಗಳ ಸ್ಥಿತಿ 2022: ರಾಜ್ಯದಲ್ಲಿ ಭಾರಿ ಏರಿಕೆ ಕಂಡ ಚಿರತೆ ಸಂಖ್ಯೆ

ಬೆಂಗಳೂರು: ಕರ್ನಾಟಕದ ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ- ಅಂಶಿ ಮತ್ತು ಬಿಆರ್‌ಟಿಯ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕನಿಷ್ಠ 1,879 ಚಿರತೆಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ‘ಭಾರತದಲ್ಲಿ ಚಿರತೆಗಳ ಸ್ಥಿತಿ 2022’ ವರದಿ ಅಂಕಿಅಂಶವನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ಗುರುವಾರ ಬಿಡುಗಡೆ ಮಾಡಿದರು.

ವರದಿಯ ಪ್ರಕಾರ, ಅರಣ್ಯ ಪ್ರದೇಶಗಳಲ್ಲಿ ಮಚ್ಚೆಯುಳ್ಳ ಚಿರತೆಗಳ ಸಂಖ್ಯೆ ಏರಿಕೆ ಕಂಡಿದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲೂ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

2018ರಲ್ಲಿ ಕರ್ನಾಟಕದಲ್ಲಿ 1,783 ಚಿರತೆಗಳನ್ನು ಗುರುತಿಸಲಾಗಿತ್ತು. ಈಗ ಚಿರತೆಗಳ ಸಂಖ್ಯೆ 96 ಹೆಚ್ಚಾಗಿವೆ. ಪಶ್ಚಿಮ ಘಟ್ಟಗಳಲ್ಲಿ 2022 ರಲ್ಲಿ 3,596 ಚಿರತೆಗಳಿದ್ದು, 2018 ರಲ್ಲಿ 3,387 ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಭಾರತದಲ್ಲಿ 13,874 ಚಿರತೆಗಳಿವೆ. ಇದು 2018 ರಲ್ಲಿ 12,852 ಚಿರತೆಗಳಿರುವುದಾಗಿ ಹೇಳಿತ್ತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಸಂಶೋಧಕರು ಭಾರತದಲ್ಲಿನ 20 ರಾಜ್ಯಗಳಲ್ಲಿನ ಚಿರತೆಗಳ ಗಣತಿಯನ್ನು 6.41 ಲಕ್ಷ ಕಿಮೀ ವ್ಯಾಪ್ತಿಯಲ್ಲಿ ಸಮೀಕ್ಷೆಗಾಗಿ ಅಧ್ಯಯನ ನಡೆಸಿದ್ದಾರೆ.

ವರದಿ ಪ್ರಕಾರ, ʼಪಶ್ಚಿಮ ಘಟ್ಟಗಳಲ್ಲಿ ಚಿರತೆ ಸಂಖ್ಯೆಯು ಏರಿಕೆ ಕಂಡಿದ್ದರು, ಇದು ಆವಾಸಸ್ಥಾನದ ನಷ್ಟ, ವಿಘಟನೆ ಮತ್ತು ಬೇಟೆಯಾಡುವಿಕೆಯ ಪರಿಣಾಮಗಳನ್ನು ಎದುರಿಸುತ್ತಿದೆʼ ಎಂದು ಹೇಳಿದೆ.

ಮಧ್ಯ ಮತ್ತು ಉತ್ತರದ ಪಶ್ಚಿಮ ಘಟ್ಟಗಳಲ್ಲಿ, ಹುಲಿ ಸಂರಕ್ಷಿತ ಪ್ರದೇಶಗಳ (ಭದ್ರಾ, ಕಾಳಿ, ಮುದುಮಲೈ ಮತ್ತು ಸತ್ಯಮಂಗಲಂ) ಚಿರತೆಗಳ ಸಂಖ್ಯೆಯು ಹೆಚ್ಚಿನ ಸಂಖ್ಯೆಯಲ್ಲಿವೆ.

ಕರ್ನಾಟಕದ ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಖಾಡೆ, ಮೀಸಲು ಪ್ರದೇಶದಲ್ಲಿನ ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಆಧರಿಸಿ ವರದಿಯಲ್ಲಿ ಚಿರತೆಗಳ ಸಂಖ್ಯೆಯನ್ನು ಪರಿಗಣಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸಚಿವ ಭೂಪೇಂದರ್ ಯಾದವ್ ಪೋಸ್ಟ್‌: ಗುರುವಾರ ಚಿರತೆ ಗಣತಿಯ ಮಾಹಿತಿಯನ್ನು ಬಿಡುಗಡೆ ಗೊಳಸಿದ ಕೇಂದ್ರ ಸಚಿವ ಭೂಪೇಂದರ್ ಯಾದವ್ ಈ ಕುರಿತು ತಮ್ಮ ಎಕ್ಸ್‌ ವಾಹಿನಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ಕುರಿತ ವರದಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಚಿರತೆ ಆಕ್ರಮಿತ ಪ್ರದೇಶದ 70% ರಷ್ಟು ಅಂದಾಜು ಚಿರತೆಗಳು ಕಂಡು ಬಂದಿದೆ. 2018 ರಲ್ಲಿ 12,852 ಚಿರತೆಗಳಿದ್ದು, ಈಗ 13,874 ಏರಿಕೆ ಕಂಡಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಮಧ್ಯಪ್ರದೇಶವು 3,907 ಚಿರತೆಗಳನ್ನು ಹೊಂದಿದ್ದು, ಅತೀಹೆಚ್ಚು ಚಿರತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ, ಈ ಸಂರಕ್ಷಣಾ ಪ್ರಯಾಣವು ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯದ ತತ್ವಗಳನ್ನು ಒಳಗೊಂಡಿದೆ. ಈ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಕೊಡುಗೆದಾರರಿಗೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ