ಹಿಮಾಚಲ ಪ್ರದೇಶ : ಕಳೆದ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆಯನ್ನು ಯೋಧರೊಂದಿಗೆ ಆಚರಿಸುವ ಮೂಲಕ ತಮ್ಮ ಪರಿಪಾಠವನ್ನು ಮುಂದುವರೆಸಿದ್ದಾರೆ.
ಇಂದು (ಭಾನುವಾರ) ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸಿದರು. ಬೆಳಿಗ್ಗೆಯೇ ಲೆಪ್ಚಾ ಭೇಟಿ ನೀಡಿದ ಪ್ರಧಾನಿ ಗಡಿ ಭಾಗದ ಸೈನಿಕರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು. ನಂತರ ಅವರೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ಈ ಲೆಪ್ಚಾ ಪ್ರದೇಶವು ಭಾರತ ಮತ್ತು ಚೀನಾ ಗಡಿಯಾಗಿದೆ.
2022ರಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಾದ ಕಾರ್ಗಿಲ್ ನಲ್ಲಿ ಇದೇ ದೀಪಾವಳಿಯನ್ನು ಪ್ರಧಾನಿ ಯೋಧರೊಂದಿಗೆ ಆಚರಿಸಿದ್ದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಎಕ್ಸ್(ಟ್ವಿಟರ್) ಖಾತೆಯಲ್ಲಿ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.