Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ; ರಾಹುಲ್ ಗಾಂಧಿ ಗಂಭೀರ ಆರೋಪ

ಒಡಿಶಾ: ನಿನ್ನೆ ( ಫೆಬ್ರವರಿ 7 ) ರಾಜ್ಯಸಭೆಯ ಸಂಸತ್‌ ಸದನದಲ್ಲಿ ಮಾತನಾಡಿದ್ದ ನರೇಂದ್ರ ಮೋದಿ ಈ ಹಿಂದಿನಿಂದಲೂ ಕಾಂಗ್ರೆಸ್‌ ಪಕ್ಷ ಒಬಿಸಿ ವಿರುದ್ಧವಾಗಿದೆ, ಎಲ್ಲಿಯೂ ಒಬಿಸಿಗೆ ಸರಿಯಾದ ಮೀಸಲಾತಿಯನ್ನು ನೀಡಿಲ್ಲ ಎಂದು ಆರೋಪಿಸಿದ್ದರು.

ಈ ಆರೋಪಕ್ಕೆ ಟಾಂಗ್‌ ನೀಡಲು ಯತ್ನಿಸಿರುವ ರಾಹುಲ್‌ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ ಎಂದು ಹೇಳಿಕೆ ನೀಡಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಒಡಿಶಾದಲ್ಲಿ ಭಾರತ್‌ ಜೋಡ್‌ ನ್ಯಾಯ್‌ ಯಾತ್ರೆಯ ಮೂರನೇ ದಿನದಂದು ಮಾತನಾಡಿದ ರಾಹುಲ್‌ ಗಾಂಧಿ ʼಪ್ರಧಾನಮಂತ್ರಿ ಒಬಿಸಿ ಕೆಟಗರಿಯಲ್ಲಿ ಹುಟ್ಟಿಲ್ಲ. ಗುಜರಾತ್‌ನಲ್ಲಿ ತೇಲಿ ಎಂಬ ಜಾತಿಯಲ್ಲಿ ಅವರು ಜನಿಸಿದರು. ಆ ಸಮುದಾಯಕ್ಕೆ 2000ರಲ್ಲಿ ಬಿಜೆಪಿ ಒಬಿಸಿ ಎಂಬ ಟ್ಯಾಗ್‌ ಅನ್ನು ನೀಡಿತು. ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ. ಅವರು ಒಬಿಸಿ ಕೆಟಗರಿಯಲ್ಲಿ ಹುಟ್ಟಿಲ್ಲ ಹಾಗೂ ಸಾಮಾನ್ಯ ಜಾತಿಯಲ್ಲಿ ಜನಿಸಿರುವ ಕಾರಣದಿಂದಲೇ ತಮ್ಮ ಸಂಪೂರ್ಣ ಜೀವನದಲ್ಲಿ ಜಾತಿಗಣತಿ ಮಾಡಲು ಬಿಡುವುದಿಲ್ಲ” ಎಂದು ಆರೋಪಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!