Mysore
20
overcast clouds
Light
Dark

ರಾಜ್ಯಕ್ಕೆ ಮತ್ತೆರಡು ಹೊಸ ವಂದೇ ಭಾರತ್‌ ರೈಲು

ಇಂದು ( ಡಿಸೆಂಬರ್‌ 30 ) ಅಯೋಧ್ಯೆಗೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ನೂತನ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಿದ್ದಾರೆ. ರೈಲು ನಿಲ್ದಾಣದ ಉದ್ಘಾಟನೆ ವೇಳೆ ಎರಡು ವಿಶೇಷ ಅಮೃತ್‌ ರೈಲು ಹಾಗೂ 6 ಹೊಸ ವಂದೇ ಭಾರತ್‌ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಅಮೃತ್‌ ರೈಲುಗಳಿಗೆ ಚಾಲನೆ ನೀಡಿದ ನರೇಂದ್ರ ಮೋದಿ ದೇಶದ ವಿವಿಧ ಹೊಸ ವಂದೇ ಭಾರತ್‌ ರೈಲುಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು. ಈ ಪೈಕಿ ರಾಜ್ಯಕ್ಕೆ ಎರಡು ವಂದೇ ಭಾರತ್‌ ರೈಲುಗಳು ಲಭಿಸಿದ್ದು, ಒಂದು ರೈಲು ಮಂಗಳೂರು ಹಾಗೂ ಮಡಗಾವ್‌ಗಳ ನಡುವೆ ಸಂಪರ್ಕ ಕಲ್ಪಿಸಿದರೆ, ಮತ್ತೊಂದು ರೈಲು ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಸಂಚರಿಸಲಿದೆ.

ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನಿಂದ ಹೊರಡಲಿರುವ ರೈಲು 11.30ಕ್ಕೆ ಬೆಂಗಳೂರು ತಲುಪಲಿದ್ದು, ಮತ್ತೆ ಮಧ್ಯಾಹ್ನ 1.40ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆಗೆ ಕೊಯಮತ್ತೂರನ್ನು ತಲುಪಲಿದೆ. ಇನ್ನು ಮಂಗಳೂರು – ಮಡಗಾವ್‌ ರೈಲು ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ಹೊರಟು ಗೋವಾದ ಮಡಗಾವ್‌ಗೆ 1.15ಕ್ಕೆ ತಲುಪಲಿದ್ದು, ಸಂಜೆ 6.10ಕ್ಕೆ ಮಡಗಾವ್‌ನಿಂದ ಹೊರಟು ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ತಲುಪಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ