ಚೆನೈ: ಕಳೆದ ಮೂರ್ನಾಲ್ಕು ದಿನಗಳಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದ. ಮಿಚೌಂಗ್ ಚಂಡಮಾರುತದ ಕಾರಣ ಹೆಚ್ಚಿನ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ತಮಿಳುನಾಡಿಗೆ ಯಾವುದೇ ರೀತಿಯ ಸಂಚಾರದ ವ್ಯವಸ್ಥೆ ಇಲ್ಲದೆ, ಇತರೆ ರಾಜ್ಯಗಳಿಂದ ಹೋಗಿರುವ ಜನರು ಹಿಂದಿರುಗಲು ಪರದಾಡುವ ಸ್ಥಿತಿ ಎದುರಾಗಿದೆ.
ಈ ಮಧ್ಯೆ ಬಾಲಿವುಡ್ ನಟ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಕೂಡ ತಮಿಳುನಾಡಿನಲ್ಲಿ ಜಲದಿಗ್ಭಂದವಾಗಿದ್ದಾರೆ. ತಮ್ಮ ತಾಯಿಯನ್ನು ನೋಡಲು ಹೋಗಿದ್ದ ಅಮಿರ್, ಭಾರಿ ಮಳೆಯಿಂದ ಎಲ್ಲಾ ರೀತಿಯ ಸಂಚಾರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಈ ಕಾರಣ ಬಾಂಬೆಗೆ ಹಿದಿರುಗಬೇಕಾಗಿದ್ದ ಖಾನ್ ಸಧ್ಯ ತಮಿಳುನಾಡಿನಲ್ಲೆ ನೆಲೆಸಿದ್ದಾರೆ. ತಮಿಳುನಾಡಿ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದು, ಬೋಟ್ ಒಂದರಲ್ಲಿ ಅಮಿರ್ ಖಾನ್ ತೆರಳುತ್ತಿರುವ ದೃಶ್ಯ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





