ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ ಬಿಟೌನ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸೊಸೆಯನ್ನು ಅಮಿತಾಭ್ ಬಚ್ಚನ್ ಅನ್ಫಾಲೋ ಮಾಡಿದ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ.
ಆದ್ರೆ ಇಲ್ಲೊಂದು ವಿಡಿಯೋ ಬೇರೆನೋ ಹೇಳ್ತಿದೆ. ಅಮಿತಾಬ್ ಬಚ್ಚನ್ ಬಾಲಿವುಡ್ನ ಬಿಗ್ಬಿ. ಇವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈರದ್ದು ಬಾಲಿವುಡ್ನಲ್ಲಿ ದೊಡ್ಡ ಹೆಸರು. ಆದ್ರೆ ಕೆಲವು ದಿನಗಳಿಂದ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಬಿಟೌನ್ ಅಂಗಳದಲ್ಲಿ ಹರಡಿತ್ತು.
ಅದಕ್ಕೆ ಕಾರಣ 16 ವರ್ಷಗಳಿಂದ ವೈವಾಹಿಕ ಬಂಧನದಲ್ಲಿದ್ದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಕೆಲವು ಕಹಿ ಘಟನೆಗಳು. ಇದೀಗ ಮತ್ತೊಮ್ಮೆ ಐಶ್ವರ್ಯಾ ಹಾಗೂ ಅಭೀಷೇಕ್ ವಿಚ್ಛೇದನ ಸುದ್ದಿ ಮುನ್ನೆಲೆಗೆ ಬಂದಿದೆ.
ಐಶ್ವರ್ಯಾ ರೈ ಹಾಗೂ ಅತ್ತೆ ಜಯಾ ಬಚ್ಚನ್ ಮಧ್ಯೆ ಹಲವಾರು ಸಮಸ್ಯೆಗಳಿವೆ ಎನ್ನಲಾಗುತ್ತಿದೆ. ಇದೇ ವಿಚಾರವಾಗಿ ಹಲವಾರು ವರ್ಷಗಳಿಂದ ಅವರಿಬ್ಬರು ಮಾತನಾಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ಇದರ ನಡುವೆ ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ತಮ್ಮ ಮುದ್ದಿನ ಸೊಸೆ ಐಶ್ವರ್ಯಾ ರೈರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದಾಗ ಈ ವದಂತಿ ಜೋರಾಗಿತ್ತು.
ಮದುವೆ ಉಂಗುರ ಇಲ್ಲದೇ ಅಭಿಷೇಕ್ ಕಾಣಿಸಿಕೊಂಡಿದ್ದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ರೆ ಅಭಿಷೇಕ್ ಐಶ್ವರ್ಯಾ ಮಧ್ಯೆ ಹಲವಾರು ವರ್ಷಗಳಿಂದ ದಾಂಪತ್ಯದಲ್ಲಿ ಕಲಹ ಇದ್ದರೂ ಅವರು ಅದನ್ನ ಹೊರಗೆ ತೋರಿಸಿಕೊಂಡಿರಲಿಲ್ಲ. ಮಗಳಿಗಾಗಿ ಇಬ್ಬರೂ ಇನ್ನೂ ಒಟ್ಟಿಗೆ ಇದ್ದಾರೆ ಎನ್ನಲಾಗುತ್ತಿದೆ.
ಈ ಜೋಡಿಯ ಕಲಹ ನಿರ್ಣಾಯಕ ಹಂತಕ್ಕೆ ಬಂದಿದೆ ಎಂಬ ಸುದ್ದಿ ಬಚ್ಚನ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.