Mysore
25
scattered clouds

Social Media

ಬುಧವಾರ, 18 ಮಾರ್ಚ್ 2026
Light
Dark

ಅಯೋಧ್ಯೆಯಲ್ಲಿ ಇನ್ಮುಂದೆ ಕರ್ಫ್ಯೂ ಜಾರಿಯಾಗುವುದಿಲ್ಲ: ಸಿಎಂ ಯೋಗಿ ಆದಿತ್ಯನಾಥ್‌

ಅಯೋಧ್ಯೆ/ಉತ್ತರ ಪ್ರದೇಶ: ಅಯೋಧ್ಯೆಯ ಬೀದಿಗಳಲ್ಲಿ ಇನ್ನು ಮುಂದೆ ಕರ್ಫ್ಯೂ ಜಾರಿಯಾಗುವುದಿಲ್ಲ, ಗುಂಡಿನ ಸದ್ದು ಕೇಳುವುದಿಲ್ಲ. ಯಾವಾಗಲೂ ಇಲ್ಲಿ ರಾಮೋತ್ಸವ ಮತ್ತು ದೀಪೋತ್ಸವ ನಡೆಯುತ್ತಲಿರುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೇಳಿದ್ದಾರೆ.

ಇಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಮಮಂದಿರ ನಿರ್ಮಿಸಲು ಪಣತೊಟ್ಟ ಜಾಗದಲ್ಲಿಯೇ ನಾವಿಂದು ರಾಮಮಂದಿರ ಉದ್ಘಾಟನೆ ಮಾಡಿದ್ದೇವೆ. ರಾಮಲಲ್ಲಾ ಸ್ಥಾಪನೆ ರಾಮರಾಜ್ಯದ ಹೆಗ್ಗುರುತಾಗಿದ್ದು, ಇಲ್ಲಿ ಸದಾ ರಾಮನಾಮ ಸ್ಮರಣೆ ನಡೆಯಲಿದೆ ಎಂದರು.

500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದು ದೇಶದ ಭಾವನಾತ್ಮಕ ಘಳಿಗೆಯಾಗಿದೆ. ಈ ದಿನ ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಸಹಾ ಅಯೋಧ್ಯೆಯಾಗಿ ಬದಲಾಗಿದೆ, ಎಲ್ಲರೂ ಸಂತುಷ್ಟರಾಗಿದ್ದಾರೆ ಎಂದು ಯೋಗಿ ನುಡಿದರು.

ದೇಶದೆಲ್ಲೆಡೆ ರಾಮನ ಛಾಯೆ ಆವರಿಸಿದೆ. ನಾವು ತೇತ್ರಾಯುಗದಲ್ಲಿರುವಂತೆ ಭಾಸವಾಗುತ್ತಿದೆ. ಮಂದಿರದ ಕನಸು ನನಸಾಗಲು ಕಾರಣರಾದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

ಇದೇ ವೇಳೆ ಬಾಬ್ರಿ ಮಸೀದಿ ಇದ್ದ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಈ ಹಿಂದೆ ನಡೆದ ಹೋರಾಟಗಳಲ್ಲಿ ಬಳಕೆಯಾದ ಮಂದಿರ್ ವಹಿ ಬನಾಯೇಂಗೆ ಘೋಷಣೆಯನ್ನು ಸಿಎಂ ಯೋಗಿ ಆದಿತ್ಯನಾಥ್‌ ಸ್ಮರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!