Mysore
20
overcast clouds
Light
Dark

ಭೂಕಂಪಕ್ಕೆ ತುತ್ತಾದ ಜಪಾನಿಗರಿಗೆ ಸಂತಾಪ: ಜಪಾನ್‌ ಪ್ರಧಾನಿಗೆ ಮೋದಿ ಪತ್ರ!

ನವದೆಹಲಿ : ಹೊಸ ವರ್ಷದ ಮೊದಲ ದಿನ ಜನವರಿ 1 ರಂದು ಸಂಭವಿಸಿದ ಭೂಕಂಪದಿಂದ ಹಾನಿಗೊಳಗಾದ ಜಪಾನ್ ಮತ್ತು ಅದರ ಜನರೊಂದಿಗೆ ಭಾರತದ ಒಗ್ಗಟ್ಟನ್ನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪತ್ರ ಬರೆದಿದ್ದಾರೆ.

ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರರಾಗಿ ಜಪಾನ್’ನೊಂದಿಗಿನ ಸಂಬಂಧವನ್ನ ಭಾರತ ಗೌರವಿಸುತ್ತದೆ ಮತ್ತು ಈ ಸಮಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನ ನೀಡಲು ಸಿದ್ಧವಾಗಿದೆ ಎಂದು ಮೋದಿ ಗುರುವಾರ ಕಿಶಿಡಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಪಾನ್ನ ಉತ್ತರದ ತುದಿಯ ನೊಟೊದಲ್ಲಿ ಸೋಮವಾರ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು 90 ಜನರು ಸಾವನ್ನಪ್ಪಿದ್ದಾರೆ. ಭೂಕಂಪದ ಬಗ್ಗೆ ‘ತೀವ್ರ ದುಃಖ ಮತ್ತು ಕಳವಳ’ ವ್ಯಕ್ತಪಡಿಸಿರುವುದಾಗಿ ಪ್ರಧಾನಿ ಜಪಾನ್ ಪ್ರಧಾನಿಗೆ ತಿಳಿಸಿದರು ಮತ್ತು ಭೂಕಂಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ‘ಆಳವಾದ ಸಂತಾಪ’ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಜನವರಿ 1 ರಂದು ಜಪಾನ್ನಲ್ಲಿ ಸಂಭವಿಸಿದ ದೊಡ್ಡ ಭೂಕಂಪದ ಬಗ್ಗೆ ತಿಳಿದು ನನಗೆ ತೀವ್ರ ದುಃಖ ಮತ್ತು ಕಳವಳವಾಗಿದೆ ಎಂದು ಮೋದಿ ಹೇಳಿದರು. ಪ್ರಾಣ ಕಳೆದುಕೊಂಡವರ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನ ವ್ಯಕ್ತಪಡಿಸುತ್ತೇನೆ. ನಾವು ಜಪಾನ್ ಮತ್ತು ವಿಪತ್ತಿನಿಂದ ಬಾಧಿತರಾದ ಅದರ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎಂದು ಮೋದಿ ಜಪಾನ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ