ನಾಳೆ ( ಜನವರಿ 22 ) ರಾಮಜನ್ಮಭೂಮಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12.15ರಿಂದ 12.45ರವರೆಗೆ ಪ್ರಾಣಪ್ರತಿಷ್ಠೆ ನಡೆಯಲಿದ್ದು, ನಾಳೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ ಹಾಗೂ ಅವುಗಳ ವೇಳಾಪಟ್ಟಿ ಈ ಕೆಳಕಂಡಂತಿದೆ.
ಪ್ರಾಣಪ್ರತಿಷ್ಠೆ – ಮಧ್ಯಾಹ್ನ 12.15ರಿಂದ 12.45
ದೇವಾಲಯ ದರ್ಶನ- ಎಂಟ್ರಿ ಪಾಸ್ ಇರುವ ಭಕ್ತರಿಗೆ ಬೆಳಗ್ಗೆ 7ರಿಂದ 11.30ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ದೇವಾಲಯ ದರ್ಶನ ಮಾಡಲು ಅವಕಾಶವಿರಲಿದೆ.
ಆರತಿಗಳು – ನಾಳೆ ಅಯೋಧ್ಯೆಯ ರಾಮಮಂದಿರದಲ್ಲಿ 3 ಆರತಿಗಳು ನಡೆಯಲಿದ್ದು, ಬೆಳಗ್ಗೆ 6.30ಕ್ಕೆ ಶೃಂಗಾರ್ / ಜಾಗರಣ ಆರತಿ, ಮಧ್ಯಾಹ್ನ 12 ಗಂಟೆಗೆ ಭೋಗ್ ಆರತಿ ಹಾಗೂ ಸಂಜೆ 7.30ಕ್ಕೆ ಸಂಧ್ಯಾ ಆರತಿ ನಡೆಯಲಿದೆ.
ಆಹ್ವಾನ ಇದ್ದ ಮಾತ್ರಕ್ಕೆ ಪ್ರವೇಶವಿಲ್ಲ: ಇನ್ನು ರಾಮಮಂದಿರ ಪ್ರವೇಶಿಸಲು ಕೇವಲ ಆಹ್ವಾನಪತ್ರಿಕೆ ಇದ್ದರೆ ಸಾಧ್ಯವಿಲ್ಲ. ಎಂಟ್ರಿ ಪಾಸ್ ಇದ್ದು ಆ ಪಾಸ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರವಷ್ಟೇ ಪ್ರವೇಶ ಸಿಗಲಿದೆ.
ಮೋದಿ ವೇಳಾಪಟ್ಟಿ
ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
10.55ಕ್ಕೆ ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್
ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55ರವರೆಗೆ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2ರವರೆಗೆ ಸಾರ್ವಜನಿಕ ಭಾಷಣ ಮಾಡಲಿರುವ ನರೇಂದ್ರ ಮೋದಿ, ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್
ಮಧ್ಯಾಹ್ನ 2.10ಕ್ಕೆ ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30ಕ್ಕೆ ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ