Mysore
24
overcast clouds

Social Media

ಗುರುವಾರ, 01 ಮೇ 2025
Light
Dark

ಗಡಿಯ ಒಳ ನುಸುಳಲು ಯತ್ನ : ಇಬ್ಬರು ಉಗ್ರರ ಹತ್ಯೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಗಡಿಯ ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಹೊಡೆದುರುಳಿಸಿದ್ದಾರೆ.

ಸೇನೆಯ ಜಾಗ್ರತದಳದ ಸಿಬ್ಬಂದಿ ಎಲ್ ಓ ಸಿ ಬಳಿ ಉಗ್ರರ ಚಲನವಲನವನ್ನು ಪತ್ತೆ ಹಚ್ಚಿ, ಉಗ್ರರು ಒಳ ನುಸುಳುವುದನ್ನು ತಡೆದಿದ್ದಾರೆ. ಈ ವೇಳೆ ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಇದರಿಂದ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ .ಉಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದೇಶದೊಳಗೆ ಉಗ್ರರು ನಸುಳಿವಿಕೆ ಕಡಿಮೆಯಾಗಿದೆ. ಅಕ್ಟೋಬರ್ ನಲ್ಲಿ ಕುಪ್ವಾರ ಜಿಲ್ಲೆಯಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ