Mysore
22
broken clouds

Social Media

ಗುರುವಾರ, 03 ಏಪ್ರಿಲ 2025
Light
Dark

ಸದನದಲ್ಲಿ ಜೈ ಭೀಮ್‌, ಜೈ ಪ್ಯಾಲೆಸ್ತೇನ್‌ ಘೋಷಣೆ ಕೂಗಿದ ಅಸಾದುದ್ದೀನ್‌ ಓವೈಸಿ

ನವದೆಹಲಿ: ಲೋಕಸಭೆಯ ಈ ವರ್ಷದ ಮೊದಲ ಅಧಿವೇಶನದಲ್ಲಿ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಪ್ರಮಾಣವಚನ ಸ್ವೀಕರಿಸಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚಿಸಿದೆ. ಈ ವರ್ಷದ ಮೊದಲ ಅಧಿವೇಶನ ನಿನ್ನೆಯಿಂದ ಆರಂಭವಾಗಿದ್ದು, ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಸಂಸದರಾಗಿದ್ದು, ಈ ನಡುವೆ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಪ್ರಮಾಣವಚನ ಸ್ವೀಕರಿಸಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಅಸಾದುದ್ದೀನ್‌ ಓವೈಸಿ ಅವರು ಪ್ರಮಾಣ ವಚನ ಸ್ವೀಕಾರದ ನಂತರದಲ್ಲಿ ಜೈ ಭೀಮ್‌, ಜೈ ತೆಲಂಗಾಣ, ಜೈ ಪ್ಯಾಲೆಸ್ತೇನ್‌ ಘೋಷಣೆಗಳನ್ನು ಕೂಗಿದ್ದು, ಇದಕ್ಕೆ ಹಲವು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಹಂಗಾಮಿ ಸ್ಪೀಕರ್‌ ಭತೃಹರಿ ಮಹತಾಬ್‌ ಅವರು, ಓವೈಸಿ ಆಕ್ಷೇಪಾರ್ಹವಾಗಿ ಏನಾದರೂ ಹೇಳಿದ್ದರೆ ಅದನ್ನು ಕಲಾಪದ ದಾಖಲೆಯಿಂದ ತೆಗೆದು ಹಾಕಲಾಗುವುದು ಎಂದು ಹೇಳಿದ್ದಾರೆ.

 

Tags: