Mysore
21
overcast clouds
Light
Dark

ಕನ್ನಿಮೋಳಿ ಕುಟುಂಬದಿಂದ ರಾಮ ಮಂದಿರಕ್ಕೆ 613 ಕೆ.ಜಿ ತೂಕದ ಗಂಟೆ ಅರ್ಪಣೆ

ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರು ಹಿಂದಿನಿಂದಲೂ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುತ್ತಲೆ ಬರುತ್ತಿದೆ. ಕರುಣಾನಿಧಿ ಅವರಿಂದ ಹಿಡಿದು, ಉದಯನಿಧಿ ಸ್ಟಾಲಿನ್‌ ವೆರೆಗೂ ಸನಾತನ ಧರ್ಮವನ್ನು ವಿರೋಧಿಸಿದ ಹಲವಾರು ಪ್ರಕರಣಗಳು ಕಣ್ಣಮುಂದಿದೆ. ಈ ಮಧ್ಯೆ ಸ್ಟಾಲಿನ್‌ ಕುಟುಂಬದಿಂದ ರಾಮ ಮಂದಿರಕ್ಕೆ 613 ಕೆ.ಜಿ ತೂಕದ ಗಂಟೆ ನೀಡಲಾಗಿದ್ದು, ಅದರಲ್ಲಿ ಜೈ ಶ್ರೀರಾಮ್‌ ಎಂದು ಬರೆಯಲಾಗಿದೆ.

613 ಕೆ.ಜಿ ತೂಕದ ಗಂಟೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ಅವರ ಕುಟುಂಬ ಸದಸ್ಯರು ಕಳುಹಿಸಿದ್ದಾರೆ ಎಂದು ಅದರಲ್ಲಿ ಬರೆಯಲಾಗಿದೆ. ಆ ಗಂಟೆಯನ್ನು ಬಾರಿಸಿದಾಗ ಓಂಕಾರ ಹೊರ ಹೊಮ್ಮುತ್ತದೆ. ಈ ಗಂಟೆಯಿಂದ ಹೊರಹೊಮ್ಮುವ ಓಂ ಶ್ರೀರಾಮನ ನೆಲೆಯಲ್ಲಿ ಅವರ ಆರಾಧ್ಯ ದೈವವಾದ ಮಹಾದೇವನ ಉಪಸ್ಥಿತಿಯನ್ನು ಕೂಡಾ ಪ್ರತಿಧ್ವನಿಸುತ್ತದೆ ಎಂದು ಹೇಳಲಾಗುತ್ತದೆ.

ಕನಿಮೊಳಿ ಯಾರು? : ಡಿಎಂಕೆ ಸಂಸದೆ ಕನಿಮೊಳಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮಲಸಹೋದರಿ. ಕನಿಮೊಳಿ ಅವರ ಪತಿ ಸಿಂಗಾಪುರದ ಪ್ರಜೆ. ಕಳೆದ ವರ್ಷದವರೆಗೂ ಅವರ ಬಳಿ ಪಾನ್ ಕಾರ್ಡ್ ಇರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಡಿಎಂಕೆ ನಾಯಕ ಉದಯನಿಧಿ ಮತ್ತೊಮ್ಮೆ ಸನಾತನ ಸಂಸ್ಥೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ಕ್ಕೆ ಹೋಲಿಸಿದ್ದರು. ಈ ಹೇಳಿಕೆ ಭಾರೀ ವಿವಾದ ಉಂಟು ಮಾಡಿದ ಮೇಲೆಯೂ ತನ್ನ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದರು. ಇದರ ನಡುವೆ ಕನಿಮೊಳಿ ಕುಟುಂಬದವರು ರಾಮ ಮಂದಿರಕ್ಕೆ ಗಂಟೆ ಉಡುಗೊರೆಯಾಗಿ ನೀಡಿದ್ದು, ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ