ನೂತನ ಸಂಸತ್ ಭವನದ ಭದ್ರತಾ ಲೋಪದ ಕುರಿತಾಗಿ ಗುರುವಾರ ಮೂವರು ಸಂಸದರ ಅಮಾನತ್ತು ಜರುಗಿದ್ದು, ಅಮಾನತ್ತಾದ ಸಂಸದರ ಸಂಖ್ಯೆ 146ಕ್ಕೆ ತಲುಪಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಸೇರಿದಂತೆ ಒಟ್ಟು ಮೂವರು ಸಂಸದರ ಅಮಾನತ್ತಾಗಿದೆ.
ಭದ್ರತಾ ಲೋಪವನ್ನು ಖಂಡಿಸಿ ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾರಣ ಈ ಸಂಸದರ ಅಮಾನತ್ತಾಗಿದೆ ಎಂದು ತಿಳಿದುಬಂದಿದ್ದು, ಪ್ರಹ್ಲಾದ್ ಜೋಶಿ ಅಮಾನತು ಪ್ರಸ್ತಾವನೆ ಮಂಡಿಸಿದ್ದರು ಎನ್ನಲಾಗಿದೆ.
ಸೋಮವಾರ ಲೋಕಸಭೆಯ 46 ಹಾಗೂ ರಾಜ್ಯಸಭೆಯ 46 ಸಂಸದರು ಸೇರಿದಂತೆ ಒಟ್ಟು 92 ಸಂಸದರ ಅಮಾನತಾಗಿತ್ತು. ಮಂಗಳವಾರ ಲೋಕಸಭೆಯ 49 ಸಂಸದರನ್ನು ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಬುಧವಾರ ಕೇರಳದ ಇಬ್ಬರು ಸಂಸದರ ಅಮಾನತು ಜರುಗಿತು. ಇಂದು ಮೂವರ ಅಮಾನತ್ತಾಗಿದ್ದು ಸದ್ಯ ಅಮಾನತ್ತಾದ ಸಂಸದರ ಸಂಖ್ಯೆ 146ಕ್ಕೆ ತಲುಪಿದೆ.





