ನವದೆಹಲಿ: ಕೇಂದ್ರ ಸರ್ಕಾರ 2021ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಗುಜರಿ ಸಾಮಗ್ರಿಗಳನ್ನು ಮಾರಿ 1163 ಕೋಟಿ ರೂ. ಗಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಹಳೆಯ ಕಡತಗಳು, ಕಾಗದ, ಹಳೆಯ ವಾಹನಗಳು ಸೇರಿ ಗುಜರಿ ವಸ್ತುಗಳನ್ನು ಮಾರಾಟ ಮಾಡಿದೆ.
ಈ ಮೂಲಕ 2021ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ 1,163 ಕೋಟಿ ರೂ.ಗಳನ್ನು ಗಳಿಸಿದೆ. 2023ರಲ್ಲಿ ಗುಜರಿ ಮಾರಾಟದಿಂದ 556 ಕೋಟಿ ರೂ. ಗಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇದರಲ್ಲಿ ರೈಲ್ವೆ ಇಲಾಖೆಯ ಗುಜರಿ ಮಾರಾಟದ ಪಾಲು 225 ಕೋಟಿ ರೂ. ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿದೆ.





