Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಹ್ಯಾಕ್‌ ಆಗಿದ್ದ ಸುಪ್ರೀಂ ಕೋರ್ಟ್ ನ YouTube ಚಾನಲ್ ಪುನರಾರಂಭ

ನವದೆಹಲಿ: ಶುಕ್ರವಾರ(ಸೆ.20) ಹ್ಯಾಕ್ ಆಗಿದ್ದ ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನಲ್ ಸೇವೆಗಳು ಪುನಾರಾರಂಭಗೊಂಡಿವೆ.

ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನಲ್ ನ್ನು ಶುಕ್ರವಾರ ಹ್ಯಾಕ್ ಮಾಡಿ, ಅಮೇರಿಕಾ ಮೂಲದ ರಿಪಲ್ಸ್ ಲ್ಯಾಂಪ್ ಎಂಬ ಕಂಪನಿ ಅಭಿವೃದ್ಧಿಪಡಿಸಿದ ಕ್ರಿಪ್ಟೊಕರೆನ್ಸಿಯ ವಿಡಿಯೋಗಳು ಅಪ್‌ಲೋಡ್‌ ಆಗಿದ್ದವು. ಬಳಿಕ ಚಾನಲ್ ಹ್ಯಾಕ್ ಆಗಿರುವ ಬಗ್ಗೆ ದೃಢಪಡಿಸಿದ ಕೋರ್ಟ್ ಚಾನಲ್‌ ಅನ್ನು ಸ್ಥಗಿತಗೊಳಿಸಿತ್ತು.

ಇದೀಗ, ಹ್ಯಾಕ್‌ ಸಮಸ್ಯೆಯನ್ನು ಬಗೆಹರಿಸಿದ್ದು, ಚಾನಲ್ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ಕೋರ್ಟ್‌ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ಸಂವಿಧಾನ ಪೀಠಗಳ ಮುಂದಿರುವ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕಾಗಿ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನಲ್ ಅನ್ನು  ಬಳಸುತ್ತಿದೆ.

Tags: