Mysore
35
few clouds

Social Media

ಭಾನುವಾರ, 19 ಏಪ್ರಿಲ 2026
Light
Dark

ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಬಂಧನ

ನವದೆಹಲಿ: ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಬಾನು ಚಿಬ್‌ ಅವರನ್ನು ದೆಹಲಿ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.

ಕಳೆದ ವಾರ ದೆಹಲಿಯ ಭಾರತ್‌ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್‌ ಸಮ್ಮಿಟ್‌ ವೇಳೆ ಯುವ ಕಾಂಗ್ರೆಸ ಕಾರ್ಯಕರ್ತರು ನಡೆಸಿದ ಅರೆನಗ್ನ ಪ್ರತಿಭಟನೆಗೆ ಸಂಬಂಧಿಸಿದಂತೆ ಚಿಬ್‌ ಅವರ ಬಂಧನವಾಗಿದೆ.

ಪ್ರತಿಭಟನೆಯ ಹಿಂದೆ ಚಿಬ್‌ ಅವರೇ ಮಾಸ್ಟರ್‌ ಮೈಂಡ್‌ ಆಗಿದ್ದು, ಪಿತೂರಿ ಹೂಡಲು ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲು ನೆರವಾಗಿದ್ದಾರೆ ಎಂದು ಪೊಲೀಸರು ವಾದಿಸಿದ್ದಾರೆ.

ತಾವು ತನಿಖೆಗೆ ಈಗಾಗಲೇ ಸಹಕರಿಸುತ್ತಿರುವುದಾಗಿ ಮತ್ತು ಕಸ್ಟಡಿಯ ಅಗತ್ಯವಿಲ್ಲ ಎಂದು ಚಿಬ್‌ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಲಯವು ಚಿಬ್‌ ಅವರ ಕಸ್ಟಡಿಗೆ ಸಂಬಂಧಿಸಿದ ಆದೇಶವನ್ನು ಪ್ರಸ್ತುತ ಕಾಯ್ದಿರಿಸಿದೆ ಎಂದು ವರದಿಯಾಗಿದೆ.

 

Tags:
error: Content is protected !!