Mysore
22
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಗಂಗಾ ಮಾತೆಯ ಘಾಟ್‌ ಬಳಿಯೇ ಸ್ನಾನ ಮಾಡಿ, ತ್ರಿವೇಣಿ ಸಂಗಮಕ್ಕೆ ಹೋಗಬೇಡಿ: ಯೋಗಿ ಅದಿತ್ಯನಾಥ್‌

ಪ್ರಯಾಗ್‌ರಾಜ್‌: ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ತ್ರಿವೇಣಿ ಸಂಗಮಕ್ಕೆ ಹೋಗಬೇಡಿ ಎಂದು ಸಾರ್ವಜನಿಕರಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಮನವಿ ಮಾಡಿದ್ದಾರೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ
ಪೋಸ್ಟ್‌ ಮಾಡಿರುವ ನೀವು ಇರುವ ಗಂಗಾ ಮಾತೆಯ ಘಾಟ್‌ ಬಳಿಯೇ ಸ್ನಾನ ಮಾಡಿ ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ. ನಾವು ಸಾಧು-ಸಂತರ ಜೊತೆಗೆ ಮಾತನಾಡಿದ್ದೇವೆ. ಹೀಗಾಗಿ ಅವರು ಮೊದಲು ಭಕ್ತಾದಿಗಳು ಪುಣ್ಯಸ್ನಾನ ಮಾಡಿದ ನಂತರ ನಾವು ಸ್ನಾನ ಮಾಡುತ್ತೇವೆ ಎಂದು ಸಾಧು-ಸಂತರು ಹಾಗೂ ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರು ಅದು ಗಂಗಾ ನದಿಯ ನೀರಾಗಿದೆ. ಆರೋಗ್ಯ ಸಮಸ್ಯೆ ಇರುವವರು ದೂರ ನಡೆಯಬೇಡಿ. ಮೌನಿ ಅಮವಾಸ್ಯೆ ದಿನದಂದು ಗಂಗಾ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿ ದೊರೆಯಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನಸ್ತೋಮ ಇರುವ ಹಿನ್ನೆಲೆ ಸಾರ್ವಜನಿಕರು ಸಂಯಮದಿಂದ ವರ್ತಿಸಿಬೇಕು. ಆಡಳಿತದ ಸೂಚನೆಗಳನ್ನು ಅನುಸರಿಸಿ ಹಾಗೂ ಅವರೊಂದಿಗೆ ಸಹಕರಿಸಬೇಕು. ಯಾವುದೇ ರೀತಿಯ ವದಂತಿಗಳಿಗಡ ಗಮನ ಕೊಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

Tags:
error: Content is protected !!