Mysore
32
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಇರಾನ್‌ನ ಮುಂದಿನ ಸರ್ವೋಚ್ಛ ನಾಯಕನನ್ನೂ ಹತ್ಯೆ ಮಾಡುತ್ತೇವೆ: ಇಸ್ರೇಲ್‌ ಎಚ್ಚರಿಕೆ

ಇಸ್ರೇಲ್:‌ ಇರಾನ್‌ನ ಮುಂದಿನ ಸರ್ವೋಚ್ಛ ನಾಯಕನನ್ನೂ ಹತ್ಯೆ ಮಾಡುತ್ತೇವೆ ಎಂದು ಇಸ್ರೇಲ್‌ ಖಡಕ್‌ ಎಚ್ಚರಿಕೆ ಕೊಟ್ಟಿದೆ.

ಇರಾನ್‌ನ ಮುಂದಿನ ನಾಯಕನ ಆಯ್ಕೆಗಾಗಿ ಟೆಹರಾನ್‌ನಲ್ಲಿ ಸಭೆ ನಡೆಸುತ್ತಿದ್ದ ಕಟ್ಟಡದ ಮೇಲೆ ಇಸ್ರೇಲ್‌ ದಾಳಿ ಮಾಡಿತ್ತು. ಈ ಬೆನ್ನಲ್ಲೇ ಈ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಇಸ್ರೇಲ್‌ ಅನ್ನು ನಾಶಮಾಡುವ ಮನಸ್ಥಿತಿ ಉಳ್ಳವರು, ಅಮೇರಿಕಾ ಮತ್ತು ಇತರ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಉದ್ದೇಶ ಹೊಂದಿರುವ ಯಾವುದೇ ವ್ಯಕ್ತಿ ಇರಾನ್‌ ನಾಯಕತ್ವ ವಹಿಸಿಕೊಂಡರೆ ಅವರನ್ನು ನಿರ್ಮೂಲನೆ ಮಾಡುತ್ತೇವೆ. ಇರಾನಿಯನ್ನರ ರಕ್ಷಣೆಗಾಗಿ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಪ್ರತಿಯೊಬ್ಬ ನಾಯಕನಿಗೂ ಸಾವೇ ಗತಿ ಎಂದು ಇಸ್ರೇಲ್‌ ಎಚ್ಚರಿಕೆ ನೀಡಿದೆ.

 

 

Tags:
error: Content is protected !!