ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ, 10 ಬಗೆಯ ಅಗತ್ಯ ತರಕಾರಿಗಳಿರುವ ಎರಡೂವರೆ ಕೆಜಿ ಕಿಟ್ ಕೇವಲ ನೂರು ರೂಪಾಯಿಗೆ ಸಿಗಲಿದೆ.
ಹಬ್ಬದ ಸಮಯದಲ್ಲಿ ತರಕಾರಿ ಬೆಲೆ ಏರಿಕೆಯಿಂದ ಕುಟುಂಬಗಳ ಖರ್ಚು ಹೆಚ್ಚಾಗುತ್ತದೆ. ಈ ಹೊರೆ ತಗ್ಗಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ರಿಯಾಯಿತಿ ದರದಲ್ಲಿ ಈ ಕಿಟ್ ಒದಗಿಸುತ್ತಿದೆ.
ಚೆನ್ನೈನ ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ ಸಹಕಾರ ಸಚಿವ ವಿ. ಗಾಂಧಿರಾಜ್ ಯೋಜನೆಗೆ ಚಾಲನೆ ನೀಡಿದರು. ಗುರುವಾರ ಇದೇ ಮಳಿಗೆಯಲ್ಲಿ ಮೊದಲ ಕಂತಿನ ತರಕಾರಿ ಕಿಟ್‌ಗಳನ್ನು ವಿತರಿಸಲಾಯಿತು. ಈ ವಿಶೇಷ ಯೋಜನೆ ಮೂರು ದಿನಗಳ ಕಾಲ ಜಾರಿಯಲ್ಲಿರಲಿದೆ.




