Mysore
32
scattered clouds

Social Media

ಗುರುವಾರ, 28 ಮೇ 2026
Light
Dark

ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಕಡ್ಡಾಯ ; ವಂದೇ ಮಾತರಂಗೂ ಶಿಷ್ಟಾಚಾರ ಗೌರವ!

ಹೊಸದಿಲ್ಲಿ : ‘ರಾಷ್ಟ್ರಗೀತೆ’ಗೂ ಮುನ್ನ ‘ವಂದೇ ಮಾತರಂ’ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆಗೊಳಿಸಿದೆ. ವಂದೇ ಮಾತರಂ’ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಷ್ಟ್ರಗೀತೆ ’ಜನ ಗಣ ಮನ’ ಹಾಡುವಾಗ ಪಾಲಿಸುವ ಶಿಷ್ಟಾಚಾರಗಳನ್ನು ‘ವಂದೇ ಮಾತರಂ’ಗೂ ಕಡ್ಡಾಯಗೊಳಿಸಿದೆ.

‘ವಂದೇ ಮಾತರಂ’ ಗೀತೆ ಪ್ರಸಾರವಾಗುವಾಗ ಅಥವಾ ಹಾಡುವಾಗ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯವಾಗಿದೆ. ಎಲ್ಲಾ ಸರ್ಕಾರಿ ಸಮಾರಂಭಗಳು ಮತ್ತು ಶಾಲೆಗಳಲ್ಲಿ ’ಜನ ಗಣ ಮನ’ ಹಾಡಿದ ತಕ್ಷಣವೇ ’ವಂದೇ ಮಾತರಂ’ ಗೀತೆಯನ್ನು ಹಾಡಬೇಕೆಂದು ತಿಳಿಸಲಾಗಿದೆ.

ಆದೇಶದ ಪ್ರಕಾರ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಗೀತೆಯನ್ನು ನುಡಿಸಿದರೆ ಅಥವಾ ಹಾಡಿದರೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆರು ಚರಣಗಳನ್ನು ವಂದೇ ಮಾತರಂ ಗೀತೆಯ 3.10 ನಿಮಿಷಗಳ ಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು. ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ.

ಯಾವುದೇ ಸಾಕ್ಷ್ಯಚಿತ್ರಗಳ ಪ್ರದರ್ಶನಗಳ ಮಧ್ಯೆ ಗೀತೆ ಹಾಡಿದರೆ ಎದ್ದುನಿಲ್ಲುವ ಅಗತ್ಯವಿಲ್ಲ. 6 ಚರಣಗಳಿರುವ ವಂದೇ ಮಾತರಂ ಗೀತೆಯನ್ನು ಹಾಡುವುದು ಕಡ್ಡಾಯ ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಲಾಗಿದೆ.

 

Tags:
error: Content is protected !!