Mysore
20
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ವಂದೇ ಭಾರತ್‌ ಸ್ಲೀಪರ್‌ ರೈಲು ಶೀಘ್ರ ಚಾಲನೆ

ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ.

ಪ್ರಯಾಣಿಕರ ಅನುಕೂಲ ಹಾಗೂ ವಿಶ್ರಾಂತಿಗೆ ಆದ್ಯತೆ ನೀಡುವ ಸಲುವಾಗಿ ಐಸಿಎಫ್ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ತಂತ್ರಜ್ಞಾನ ಬಳಸಿಕೊಂಡು ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಈ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಿದೆ.

ವಂದೇ ಭಾರತ್ ಸ್ಲೀಪರ್ ಕೋಚ್‌ನ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ಗುವಾಹಟಿ-ಹೌರಾ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಮೂಲಗಳು ಹೇಳಿವೆ.

ಗುವಾಹಟಿ-ಹೌರಾ ಮಾರ್ಗದಲ್ಲಿ ಸಂಚರಿಸುವ ರೈಲು ಅಸ್ಸಾಂನ ಗುವಾಹಟಿ (ಕಾಮಾಖ್ಯ) ಮತ್ತು ಪಶ್ಚಿಮ ಬಂಗಾಳದ ಹೌರಾದ ನಡುವೆ ರಾತ್ರಿ ವೇಲೆ ಸುಮಾರು ೧,೨೦೦-೧,೫೦೦ ಕಿ.ಮೀ. ದೂರ ಕ್ರಮಿಸಲಿದೆ. ಇದು ಅಸ್ಸಾಂ, ಉತ್ತರ ಬಂಗಾಳ ಮತ್ತು ಪಶ್ಚಿಮ ಬಂಗಾಳದ ಅನೇಕ ಜಲ್ಲೆಗಳನ್ನು ಸಂದಿಸಲಿದೆ.

 

Tags:
error: Content is protected !!