ಉತ್ತರಪ್ರದೇಶ: ಮನೆಯ ಫ್ರಿಡ್ಜ್‌ನಲಿ ಗೋಮಾಂಸ ಇಟ್ಟಿದ್ದರು ಎಂದು ಆರೋಪಿಸಿ ಜಿಲ್ಲಾಡಳಿತ 11ಮನೆಗಳನ್ನು ಏಕಾಏಕಿ ದ್ವಂಸ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಾಂಟ್ಲಾದಲ್ಲಿ ನಡೆದಿದೆ.
ಅಕ್ರಮ ಗೋಮಾಂಸ ವಿರುದ್ಧ ಕ್ರಮವಾಗಿ ಈ ಕಾರ್ಯ ಮಾಡಲಾಗಿದ್ದು, ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಎಲ್ಲಾ 11 ಮನೆಗಳನ್ನು ಜಿಲ್ಲಾಡಳಿತ ಜೆಸಿಬಿ ಮೂಲಕ ದ್ವಂಸ ಮಾಡಿದೆ.
ನೈನ್‌ಪುರದ ಭೈಸವಾಹಿ ಪ್ರದೇಶದಲ್ಲಿ ಗೋವುಗಳನ್ನು ಬಲಿ ಕೊಡಲು ಕರೆ ತಂದಿರುವ ಖಚಿತ ಮಾಹಿತಿ ಮೇರೆಗೆ ರಹಸ್ಯ ಕಾರ್ಯಾಚರಣೆ ಮಾಡಿದ ಸ್ಥಳೀಯ ಪೊಲೀಸರು, ಆರೋಪಿಗಳಿಂದ 150 ದನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ತಿಳಿಸಿದ್ದಾರೆ.
ಆರೋಪಿಗಳ 11 ಮನೆಯಲ್ಲಿರುವ ಫ್ರಿಡ್ಜ್‌ನಿಂದ ಹಸುವಿನ ಚರ್ಮ, ಕೊಬ್ಬು ಹಾಗೂ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಸ್ಥಳೀಯ ಸರ್ಕಾರಿ ವೈದ್ಯರು ಗೋಮಾಂಸ ಎಂದು ದೃಢಪಡಿಸಿದ್ದಾರೆ. ಡಿಎನ್‌ಎ ಸ್ಯಾಂಪಲ್ ಕೂಡಾ ಕಲೆಹಾಕಲಾಗಿದೆ. ಇನ್ನು ಎಲ್ಲಾ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಸರ್ಕಾರಿ ಸ್ವಾಮ್ಯದ ಜಮೀನಿನಲ್ಲಿ ನಿರ್ಮಿಸಿದ್ದ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಎಸ್‌ಪಿ ಸಕ್ಲೇಚಾ ಮಾಹಿತಿ ನೀಡಿದ್ದಾರೆ.