ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಹಣ ಮೀಸಲಿರಿಸಲಾಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಸಂಸತ್ ಭವನದಲ್ಲಿ ಇಂದು(ಫೆಬ್ರವರಿ.1) ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನ ಗಾತ್ರ 50,65,345 ಲಕ್ಷ ಕೋಟಿ ರೂಪಾಯಿಯಾಗಿದ್ದು, ಈ ಹಣದಲ್ಲಿ ಹಲವು ಕ್ಷೇತ್ರಗಳಿಗೆ ಹಣವನ್ನು ಮೀಸಲಿರಿಸಲಾಗಿದೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದು
1. ರಕ್ಷಣಾ- 4,91,732 ಕೋಟಿ ರೂಪಾಯಿ.
2. ಗ್ರಾಮೀಣಾಭಿವೃದ್ಧಿ- 2,66,817 ಕೋಟಿ ರೂಪಾಯಿ
3. ಗೃಹ ವ್ಯವಹಾರ- 2,33,211 ಕೋಟಿ ರೂಪಾಯಿ
4. ಕೃಷಿ ಮತ್ತು ಇನ್ನಿತರ ಸಂಬಂಧ ಚಟುವಟಿಕೆಗಳು – 1,71, 437 ಕೋಟಿ ರೂಪಾಯಿ
5. ಶಿಕ್ಷಣ- 1,28,650 ಕೋಟಿ ರೂಪಾಯಿ
6. ಆರೋಗ್ಯ-98,311 ಕೋಟಿ ರೂಪಾಯಿ
7. ನಗರಾಭಿವೃದ್ಧಿ-96,777 ಕೋಟಿ ರೂಪಾಯಿ
8. ಐಟಿ ಮತ್ತು ಟೆಲಿಕಾಂ-95,298 ಕೋಟಿ ರೂಪಾಯಿ
9. ವಿದ್ಯುತ್-81,174 ಕೋಟಿ ರೂಪಾಯಿ
10. ವಾಣಿಜ್ಯ ಮತ್ತು ಕೈಗಾರಿಕೆ-65,553 ಕೋಟಿ ರೂಪಾಯಿ
11. ಸಮಾಜ ಕಲ್ಯಾಣ ಇಲಾಖೆ-60,052 ಕೋಟಿ ರೂಪಾಯಿ
12. ವೈಜ್ಞಾನಿಕ ಇಲಾಖೆಗಳು-55,679 ಕೋಟಿ ರೂಪಾಯಿ