Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು ದೇಶಂ ಪಕ್ಷ(ಟಿಡಿಪಿ) ಗುರುವಾರ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಗುಜರಾತ್‌ ಮೂಲದ ಜಾನುವಾರು ಹಾಗೂ ಆಹಾರ ಕುರಿತ ಪ್ರಯೋಗಾಲಯದ ವರದಿಯನ್ನು ಪ್ರದರ್ಶಿಸಿರುವ ಟಿಡಿಪಿ ಪಕ್ಷದ ವಕ್ತಾರ ಅನಂ ವೆಂಕಟರಮಣ ರೆಡ್ಡಿ, ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಅವಧಿಯಲ್ಲಿ ತಿರುಪತಿ ಪ್ರಸಾದ ತಯಾರಿಕೆಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಟೀಕಿಸಿದ್ದಾರೆ. ಸದ್ಯ ಈ ಆರೋಪ ಆಂಧ್ರ ಪ್ರದೇಶದಲಿ ಸಂಚಲನ ಸೃಷ್ಟಿಮಾಡಿದೆ.

ಲಾಡುವಿನ ತಯಾರಿಕೆಯಲ್ಲಿ ಬಳಕೆಯಾದ ತುಪ್ಪದ ಮಾದರಿಯ ದನ ಹಾಗೂ ಹಂದಿ ಕೊಬ್ಬು, ಮೀನಿನ ಎಣ್ಣೆಯ ಮಾದರಿಗಳು ಪತ್ತೆಯಾಗಿವೆ. ಈ ಮಾದರಿಯನ್ನು 2024ರ ಜುಲೈ 9 ರಂದು ಸಂಗ್ರಹಿಸಲಾಗಿದೆ. ಜುಲೈ 16 ರಂದು ಪ್ರಯೋಗಾಲಯ ತನ್ನ ವರದಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಪ್ರಯೋಗಾಲಯದ ವರದಿಯನ್ನು ಆಂಧ್ರ ಪ್ರದೇಶದ ಸರ್ಕಾರವಾಗಲೀ ಅಥವಾ ವೆಂಕಟೇಶ್ವರ ಸ್ವಾಮಿ ದೇಗುಲವಾಗಲಿ ಖಾತ್ರಿಪಡಿಸಿಲ್ಲ.

Tags: