Mysore
31
scattered clouds

Social Media

ಶನಿವಾರ, 16 ಮೇ 2026
Light
Dark

ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ: ಸಿಬಿಐ ತನಿಖೆಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಹೇಳಲಾಗುವ ತಿರುಪಯಯಿ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

2019ರಿಂದ 2024ರ ಅವಧಿಯಲ್ಲಿ ಲಡ್ಡು ಪ್ರಸಾದಕ್ಕೆ ರಾಸಾಯನಿಕ ಯುಕ್ತವಾದ ತುಪ್ಪ ಬಳಕೆ ಮಾಡಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಬಗ್ಗೆ ಗೊತ್ತಿದ್ದರೂ ಟಿಟಿಡಿ ತುಪ್ಪ ಖರೀದಿ ಮುಂದುವರಿಸಿತ್ತು ಎಂದು ಸಿಬಿಐ ಬಹಿರಂಗಪಡಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ತನಿಖಾ ತಂಡ ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ತುಪ್ಪದಲ್ಲಿ ಬೀಟಾ ಸೆಟೋಸ್ಟೇರಾಲ್‌ ಎಂಬ ರಾಸಾಯನಿಕ ಇರುವುದನ್ನು ಪತ್ತೆ ಮಾಡಿದ್ದು, ಗಂಭೀರ ಗುಣಮಟ್ಟ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದರೂ ಟಿಟಿಡಿ ಕ್ರಮ ಕೈಗೊಳ್ಳಲು ವಿಫಲವಾಯಿತು.

2020ರಲ್ಲಿ ಟಿಟಿಡಿ ಅಧಿಕಾರಿಗಳು ಮೊದಲು ತುಪ್ಪದ ಟೆಂಡರ್‌ ನಿಯಮ ಬಿಗಿಗೊಳಿಸಿದರು. ನಂತರ ಯಾವುದೇ ಸ್ಪಷ್ಟನೆ ನೀಡದೇ ಕೇವಲ ಐದೇ ತಿಂಗಳಿನಲ್ಲಿ ಟೆಂಡರ್‌ ನಿಯಮ ಸಡಿಲಗೊಳಿಸಿದ್ದರು ಎಂದು ಹೇಳಿದೆ.

 

Tags:
error: Content is protected !!