ಗೋಪಾಲಗಂಜ್: ಜೈಲು ತಪಾಸಣೆ ವೇಳೆ, ಅಧಿಕಾರಿಗಳ ಭಯದಿಂದ ಕೈದಿಯೊಬ್ಬ ಮೊಬೈಲ್ ಫೋನ್ ನುಂಗಿದ ವಿಕ್ಷಿಪ್ತ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲಾ ಜೈಲಿನಲ್ಲಿ ಶನಿವಾರ ನಡೆದಿದೆ.
ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕ್ವೈಷರ್ ಅಲಿ ಎಂಬಾತನೇ ತಪಾಸಣೆ ವೇಳೆ ಮೊಬೈಲ್ ನುಂಗಿದ ವ್ಯಕ್ತಿ. ಭಾನುವಾರ ಭಾರೀ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಈ ವೇಳೆ ತಾನು ಮೊಬೈಲ್ ನುಂಗಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆ ಸಾಗಿಸಿ ಎಕ್ಸ್‌ರೇ ವಾಡಿಸಲಾಗಿದ್ದು, ಆತನ ಉದರದಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ.
ಪ್ರಕರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ಘಟನೆ ಬಗ್ಗೆ ಅಧ್ಯಯನಕ್ಕೆ ಆಸ್ಪತ್ರೆಯ ಮೆಡಿಕಲ್ ಬೋರ್ಡ್ ರಚಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು ಕೈದಿನ್ನು ಪಟ್ನಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಎ.22ರಿಂದ ಚಾರ್ಧಾಮ್ ಯಾತ್ರೆ ಆರಂಭ