Mysore
22
broken clouds

Social Media

ಶುಕ್ರವಾರ, 18 ಸೆಪ್ಟೆಂಬರ್ 2026
Light
Dark

ಬಾಂಗ್ಲಾದೇಶದಲ್ಲಿ ಮುಂದುವರಿದ ಕಿಡಿಗೇಡಿಗಳ ಅಟ್ಟಹಾಸ: ಇಬ್ಬರು ಹಿಂದುಗಳ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಓರ್ವ ಪತ್ರಕರ್ತ ಹಾಗೂ ಉದ್ಯಮಿಯಾದರೆ ಮತ್ತೊಬ್ಬರು ದಿನಸಿ ಅಂಗಡಿ ಮಾಲೀಕ ಎಂಬ ಮಾಹಿತಿ ಲಭ್ಯವಾಗಿದೆ.

ಮೋನಿರಾಂಪುರ್‌ ಪ್ರದೇಶದಲ್ಲಿ ಐಸ್‌ ಕಾರ್ಖಾನೆಯ ಮಾಲೀಕ ರಾಣಾ ಪ್ರತಾಪ್‌ ಬೈರಾಗಿ ಎಂಬುವವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಅದೇ ರೀತಿ ಸೋಮವಾರ ರಾತ್ರಿ ನರ್ಸಿಂಗ್ಡಿ ಎಂಬಲ್ಲಿ ಶರತ್‌ ಚಕ್ರವರ್ತಿ ಎಂಬ ದಿನಸಿ ವ್ಯಾಪಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

Tags:
error: Content is protected !!