ತಿರುವನಂತಪುರ: 23 ವರ್ಷದ ಮಹಿಳೆ ತನ್ನ ಬಾಯ್‌ಫ್ರೆಂಡ್‌ಗೆ ಪಾನೀಯದಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಗ್ರೀಷ್ಮಾ ಎಂಬ ಮಹಿಳೆ ತನ್ನ ಗೆಳೆಯ ಶರೋನ್ ರಾಜ್‌ಗೆ ಪ್ಯಾರಾಕ್ವಾಟ್ ಎಂಬ ಕಳೆನಾಶಕ ನೀಡಿ ಕೊಲೆ ಮಾಡಿದ್ದಳು.
ತಮಿಳುನಾಡಿನ ಸೇನಾ ಸಿಬ್ಬಂದಿಯೊಂದಿಗೆ ಗ್ರೀಷ್ಮಾಳ ವಿವಾಹ ನಿಶ್ಚಯವಾಗಿತ್ತು. ಆದರೆ ಆಕೆಯ ಬಾಯ್‌ಫ್ರೆಂಡ್ ಶರೋನ್ ರಾಜ್ ಮದುವೆಗೆ ಅಡ್ಡಿ ಪಡಿಸುವುದಾಗಿ ಹೇಳುತ್ತಿದ್ದ. ಈ ಹಿನ್ನೆಲೆಯಲ್ಲಿ ಪಾನೀಯದಲ್ಲಿ ವಿಷ ಬೆರೆಸಿ ಪ್ರಿಯಕರ ಶರೋನ್ ರಾಜ್ ಕೊಲೆ ಮಾಡಿದ್ದಳು. ವಿಷ ಕುಡಿದ 11 ದಿನಗಳ ನಂತರ ಬಹು ಅಂಗಾಂಗಗಳ ವೈಫಲ್ಯದಿಂದ ಆತ ಸಾವನ್ನಪ್ಪಿದ್ದನು.
ಘಟನೆ ನಡೆದು ಎರಡು ವರ್ಷಗಳ ನಂತರ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪ ದೋಷಿಗಳೆಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ಕೇರಳದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅತ್ಯಂತ ಕಿರಿಯ ಮಹಿಳೆ ಇವಳಾಗಿದ್ದಾಳೆ.