Mysore
27
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಐ ಮಹಿಳಾ ಸಿಬ್ಬಂದಿ ಬೆಂಗಳೂರಿಗೆ ವರ್ಗಾವಣೆ

ಬೆಂಗಳೂರು: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಎಫ್‌ ಮಹಿಳಾ ಸಿಬ್ಬಂದಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಘಟನೆ ಬಳಿಕ ಶಿಸ್ತು ಉಲ್ಲಂಘನೆ ವಿಚಾರಣೆ ಬಾಕಿಯಿರುವಂತೆ ಸಿಬ್ಬಂದಿ ಕುಲ್ವಿಂದರ್‌ ಕೌರ್‌ ಅವರನ್ನು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಿಐಎಸ್‌ಎಫ್‌ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್‌ ತಿಳಿಸಿದೆ.

2024ರ ಜೂನ್‌ 7 ರಂದು ಮಂಡಿ ಲೋಕಸಭಾ ಸಂಸದೆ ಕಂಗನಾ ರಣಾವತ್‌ ಚಂಡೀಗಢ್‌ನಿಂದ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಲ್ವಿಂದರ್‌ ಕೌರ್‌ ಅವರು ಸಂಸದೆ ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಬಳಿಕ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಬಗ್ಗೆ ಅಗೌರವ ತೋರುವ ರೀತಿಯಲ್ಲಿ ಮಾತನಾಡಿದ್ದರು ಆ ಕಾರಣ ಕಪಾಳಮೋಕ್ಷ ಮಾಡಿದ್ದೇನೆ ಎಂದು ಕುಲ್ವಿಂದರ್‌ ಹೇಳಿಕೆ ನೀಡಿದ್ದರು.

 

 

Tags:
error: Content is protected !!