Mysore
25
overcast clouds

Social Media

ಸೋಮವಾರ, 31 ಆಗಸ್ಟ್ 2026
Light
Dark

ಮನೆಗಳಿಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲಲಾಗುತ್ತಿದೆ: ನರೇಂದ್ರ ಮೋದಿ

ಉತ್ತರಾಖಂಡ: ಇಲ್ಲಿನ ರಿಷಿಕೇಶದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ದೇಶದಲ್ಲಿ ದೃಢವಿದೆ ಹೀಗಾಗಿ ಭಯೋತ್ಪಾದಕರನ್ನು ಮನೆಗಳಿಗೆ ನುಗ್ಗಿ ಕೊಲ್ಲಲಾಗುತ್ತಿದೆ ಎಂದು ಹೇಳಿದರು.

ದೇಶದ ತ್ರಿವರ್ಣ ಧ್ವಜ ಯುದ್ಧ ವಲಯದಲ್ಲೂ ಭದ್ರತೆಯ ಭರವಸೆಯಾಗುತ್ತಿದೆ. 7 ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಲಾಗಿದೆ. ತ್ರಿವಳಿ ತಲಾಖ್‌ ವಿರುದ್ಧ ಕಾನೂನು ರಚಿಸಲಾಗಿದೆ, ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಕ್ಕಿದೆ. ಜತೆಗೆ ಸಾಮಾನ್ಯ ವರ್ಗಕ್ಕೆ ಸೇರಿದ ಬಡವರಿಗೂ ಶೇ.100ರಷ್ಟು ಮೀಸಲಾತಿ ಸಿಕ್ಕಿದೆ ಎಂದು ನರೇಂದ್ರ ಮೋದಿ ತಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಮೆಲುಕು ಹಾಕಿದರು.

ಕಳೆದ 10 ವರ್ಷಗಳಲ್ಲಿ ದೇಶವನ್ನು ಮೊದಲಿಗಿಂತಲೂ ಹಲವು ಪಟ್ಟು ಬಲಿಷ್ಠ ಮಾಡಿದ ಸರ್ಕಾರ ಇಂದು ದೇಶದಲ್ಲಿದೆ. ದೇಶದಲ್ಲಿ ದುರ್ಬಲ ಸರ್ಕಾರ ಇದ್ದಾಗೆಲ್ಲಾ ಶತ್ರುಗಳು ಲಾಭ ಮಾಡಿಕೊಂಡಿದ್ದಾರೆ ಮತ್ತು ಭಯೋತ್ಪಾದನೆಯನ್ನು ಹಬ್ಬಿಸಿದ್ದಾರೆ. ಈಗ ಮೋದಿ ಸರ್ಕಾರ ಬಲಿಷ್ಠವಾಗಿದೆ, ಆದ್ದರಿಂದ ಅವರ ಮನೆಗಳಿಗೆ ನುಗ್ಗಿ ಅವರನ್ನು ಕೊಲ್ಲಲಾಗುತ್ತಿದೆ ಎಂದು ಮೋದಿ ಹೇಳಿಕೆ ನೀಡಿದರು.

Tags:
error: Content is protected !!