Mysore
26
few clouds

Social Media

ಗುರುವಾರ, 05 ಡಿಸೆಂಬರ್ 2024
Light
Dark

ಆದಾಯ ತೆರಿಗೆ ಪಾವತಿಯ ಗಡುವು ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಪಾವತಿಯ ಗಡುವನ್ನು ಡಿಸೆಂಬರ್.‌15ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವ ಗಡುವನ್ನು ಮತ್ತೆ ಹದಿನೈದು ದಿನಗಳ ಕಾಲ ವಿಸ್ತರಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ಡಿಸೆಂಬರ್.‌15ರವರೆಗೆ ಕಾಲಾವಕಾಶ ಒದಗಿಸಿದೆ.

ಸೆಕ್ಷನ್‌92ಇಗೆ ಸಂಬಂಧಿಸಿದ ವರದಿಯನ್ನು ಒದಗಿಸಬೇಕಾದ ಅಗತ್ಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 139(1)ರ ಅಡಿ ಆದಾಯದ ರಿಟರ್ನ್ಸ್‌ ಸಲ್ಲಿಸಲು ನವೆಂಬರ್.‌30 ಅಂತಿಮ ದಿನವಾಗಿತ್ತು.

ಆದರೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಇದೀಗ 2024-25ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಿದೆ.

 

Tags: