ತಮಿಳುನಾಡು/ರಾಮೇಶ್ವರಂ: ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮನವಮಿ ಹಬ್ಬದ ದಿನವೇ ತಮಿಳುನಾಡಿನ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆಗೆ ಚಾಲನೆ ನೀಡಿದ್ದಾರೆ.
ರಾಮೇಶ್ವರಂ ಹಾಗೂ ಪಂಬನ್ ಮಧ್ಯೆ ಇರುವ ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಬ್ರಿಡ್ಜ್‌ಗೆ ಇಂದು(ಏಪ್ರಿಲ್.6) ಮೋದಿ ಅವರು ಉದ್ಘಾಟಿಸಿದ್ದಾರೆ. ಈ ಸೇತುವೆಯೂ ಪಂಬನ್ ಮತ್ತು ರಾಮೇಶ್ವರಂ ನಡುವೆ ಸಂಪರ್ಕ ಕಲ್ಪಿಸುವ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದೆ. ರಾಮೇಶ್ವರಂ ಹಾಗೂ ಚೆನ್ನೈನ ತಂಬರಂಗೆ ಸಂಪರ್ಕಿಸುವ ಹೊಸ ರೈಲು ಸೇವೆ ಹಾಗೂ ಕರಾವಳಿ ಕಾವಲು ಪಡೆ ಹಡಗಿಗೆ ಮೋದಿ ಚಾಲನೆ ನೀಡಿದ್ದಾರೆ
ಇನ್ನೂ ಈ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರದ ಸಮಯದಲ್ಲಿ ಮೇಲಕ್ಕೆ ಎತ್ತಲ್ಪಡುವ ಸೇತುವೆಯಾಗಿದೆ.
ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಬಗ್ಗೆ ಮಾಹಿತಿ
ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಸುಮಾರು 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 2.08 ಕಿ.ಮೀಟರ್ ಇದೆ.. ಇದು 99 ಸ್ಪ್ಯಾನ್‌ಗಳನ್ನು ಹಾಗೂ 72.5 ಮೀ. ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದೆ. ಅಲ್ಲದೇ ಇದು 17 ಮೀಟರ್ ಎತ್ತರಕ್ಕೆ ಏರುತ್ತದೆ. ಇದರಿಂದ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ರೈಲು ಕಾರ್ಯಾಚರಣೆಯೂ ಸಹ ಯಾವುದೇ ಅಡೆತಡೆಯಿಲ್ಲದೇ ಸಂಚಾರ ಮಾಡುತ್ತದೆ.