ಉತ್ತರ ಪ್ರದೇಶ: ಇಲ್ಲಿನ ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿಯ ಸಂಭ್ರಮ ಸಡಗರ ಮನೆಮಾಡಿದ್ದು, ಈ ಶುಭ ಗಳಿಗೆಯಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಿದೆ.
ಸೂರ್ಯನ ಕಿರಣವು ನೇರವಾಗಿ ರಾಮಲಲ್ಲಾ ಮೂರ್ತಿಯ ಹಣೆಯ ಮೇಲೆ ಬಿದ್ದ ದೃಶ್ಯ ಕಂಡುಬಂದಿದೆ.
ನಿಖರವಾಗಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ಸೂರ್ಯ ರಶ್ಮಿ ದಿವ್ಯ ತಿಲಕವನ್ನು ರೂಪಿಸಿದೆ.
ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುತ್ತಿರುವ ಬೆನ್ನಲ್ಲೇ ರಾಮಲಲ್ಲಾ ಮೂರ್ತಿಗೆ ಸೂರ್ಯ ಕಿರಣವು ಆಧ್ಮಾತ್ಮಿಕ ಹೊಳಪನ್ನು ನೀಡಿದೆ.
ರಾಮನವಮಿಯ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರವು ಹೂವು, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಇಂದು ಲಕ್ಷಾಂತರ ಮಂದಿ ಸಾರ್ವಜನಿಕರು ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ.





