Mysore
20
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್‌ ಸಿಂಗ್‌ ಬಾದಲ್‌ ಮೇಲೆ ಗುಂಡಿನ ದಾಳಿ

ಚಂಡೀಘಡ: ಶಿರೋಮಣಿ ಅಕಾಲಿದಳದ ನಾಯಕ ಸುಖಬೀರ್‌ ಸಿಂಗ್‌ ಬಾದಲ್‌ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಅಮೃತಸರದ ಗೋಲ್ಡನ್‌ ಟೆಂಪಲ್‌ ಪ್ರದೇಶ ದ್ವಾರದಲ್ಲಿ ನಡೆದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಂಜಾಬ್‌ನ ಮಾಜಿ ಡಿಸಿಎಂ ಆಗಿರುವ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರು ಸ್ವರ್ಣ ಮಂದಿರದ ಮುಂಭಾಗದಲ್ಲಿ ಸೇವಾದಾರನಾಗಿ ಕರ್ತವ್ಯ ನೇರವೇರಿಸಿದ್ದರು.

ಸೇವಾದಾರನ ಸಮವಸ್ತ್ರ ಧರಿಸಿದ್ದ ಸುಖ್‌ಬೀರ್‌ ಅವರು, ಕೈಯಲ್ಲಿ ಈಟಿ ಹಿಡಿದು ಸ್ವರ್ಣಮಂದಿರದ ಕಾವಲು ಕಾಯ್ದರು. ಕಾಲಿನ ಮೂಳಕೆ ಮುರಿದಿರುವ ಕಾರಣ, ಗಾಲಿ ಕುರ್ಚಿಯ ಮೇಲೆಯೇ ಕುಳಿತು ಶಿಕ್ಷೆ ಪೂರೈಸಿದ್ದರು. ಈ ವೇಲೆ ಬಾದಲ್‌ ಮೇಲೆ ದಾಳಿ ನಡೆಸಲಾಗಿದ್ದು, ಬಾದಲ್‌ ಸ್ವಲ್ಪದರಲ್ಲೇ ಪಾರಾಗಿ ಸುರಕ್ಷಿತವಾಗಿದ್ದಾರೆ. ಈ ಮಧ್ಯೆ ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಎಸ್‌ಎಡಿ ಆರೋಪಿಸಿದೆ.

Tags:
error: Content is protected !!