Mysore
29
overcast clouds

Social Media

ಗುರುವಾರ, 11 ಜೂನ್ 2026
Light
Dark

ಬ್ಯಾಂಕಾಕ್‌, ಥೈಲಾಂಡ್‌ನಲ್ಲಿ ಭೀಕರ ಭೂಕಂಪ ; 7.7 ತೀವ್ರತೆ ದಾಖಲು

ಬ್ಯಾಂಕಾಕ್‌ : ಮ್ಯಾನ್ಮಾರ್‌ ಮತ್ತು ಥೈಯ್ಲಾಂಡ್‌ ದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಭಾರಿ ಪ್ರಮಾಣದ ಭೂಕಂಪ ಇದಾಗಿದ್ದು, ರಿಕ್ಟರ್‌ ಮಾಪನದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪನದ ತೀವ್ರತೆಗೆ ಗಗನಚುಂಬಿ ಕಟ್ಟಡಗಳು ಧರೆಗುರುಳಿದವು. ಈ ವೇಳೆ ಭಾರಿ ಪ್ರಮಾಣದ ಧೂಳೂ ಇಡೀ ನಗರವನ್ನೇ ಆವರಿಸಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೃಶ್ಯದಲ್ಲಿ ಜನರ ಚೀರಾಟಗಳು ಹೃದಯ ಕಲಕುವಂತಿದೆ.

ಪ್ರಾಥಮಿಕ ವರದಿ ಪ್ರಕಾರ, ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ10ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜೆಎಫ್‌ಝಡ್‌ ಭೂವಿಜ್ಞಾನ ಕೇಂದ್ರ ಹೇಳಿದೆ.

Tags:
error: Content is protected !!