ಬ್ಯಾಂಕಾಕ್ : ಮ್ಯಾನ್ಮಾರ್ ಮತ್ತು ಥೈಯ್ಲಾಂಡ್ ದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಭಾರಿ ಪ್ರಮಾಣದ ಭೂಕಂಪ ಇದಾಗಿದ್ದು, ರಿಕ್ಟರ್ ಮಾಪನದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪನದ ತೀವ್ರತೆಗೆ ಗಗನಚುಂಬಿ ಕಟ್ಟಡಗಳು ಧರೆಗುರುಳಿದವು. ಈ ವೇಳೆ ಭಾರಿ ಪ್ರಮಾಣದ ಧೂಳೂ ಇಡೀ ನಗರವನ್ನೇ ಆವರಿಸಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೃಶ್ಯದಲ್ಲಿ ಜನರ ಚೀರಾಟಗಳು ಹೃದಯ ಕಲಕುವಂತಿದೆ.
ಪ್ರಾಥಮಿಕ ವರದಿ ಪ್ರಕಾರ, ಮ್ಯಾನ್ಮಾರ್‌ನ ಮಂಡಲೆ ನಗರದ ಬಳಿ10ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜೆಎಫ್‌ಝಡ್ ಭೂವಿಜ್ಞಾನ ಕೇಂದ್ರ ಹೇಳಿದೆ.





