ಕೊಲಂಬೊ: ಹರಿಣಿ ಅಮರಸೂರ್ಯ ಅವರಿಂದು ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಹರಿಣಿಯವರಿಗೆ ಅಧ್ಯಕ್ಷ ಅನುರಾ ಕುಮಾರ್ ದಿಸ್ಸಾನಾಯಕ ಅವರು ಪ್ರಮಾಣ ವಚನ ಬೋಧಿಸಿದರು.
ದಿಸ್ಸಾನಾಯಕ ಅವರೇ ಹರಿಣಿ ಅವರನ್ನು ಪ್ರಧಾನಿಯನ್ನಾಗಿ ನೇಮಕಗೊಳಿಸಿದರು. ಒಟ್ಟು ನಾಲ್ಕು ಮಂದಿಯನ್ನು ಸಚಿವರನ್ನಾಗಿಯೂ ನೇಮಕ ಮಾಡಿದ್ದಾರೆ.
ಹರಿಣಿಯವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಹಾಗೂ ಬಂಡವಾಳ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಇನ್ನು ಅಧ್ಯಕ್ಷೀಯ ಚುನಾವಣೆಯ ಬಳಿಕ ಪ್ರಧಾನಿ ಹುದ್ದೆಗೆ ದಿನೇಶ್ ಗುಣವರ್ಧನ ರಾಜೀನಾಮೆ ನೀಡಿದ್ದರು. ಅವರ ಸ್ಥಾನವನ್ನು ಹರಿಣಿ ತುಂಬಲಿದ್ದು, ಅವರ ಆಡಳಿತ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.