Mysore
27
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಲೈಂಗಿಕ ದೌರ್ಜನ್ಯ ಆರೋಪ : ಕೇರಳದ ರ‍್ಯಾಪರ್‌ ವೇದನ್‌ ವಿರುದ್ಧ ದೂರು ದಾಖಲು

Sexual Assault Allegation: Case Filed Against Kerala Rapper Vedan

ಕೊಚ್ಚಿ : ಮಲಯಾಳಂನ ಖ್ಯಾತ ರ‍್ಯಾಪರ್ ವೇದನ್ ಅಲಿಯಾಸ್ ಹಿರಂದಾಸ್ ಮುರುಳಿ ಅವರು ನನ್ನ ಮೇಲೆ 2021-2023ರ ನಡುವೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವಾರು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳಾ ವೈದ್ಯೆಯೊಬ್ಬರು ದೂರು ನೀಡಿದ್ದಾರೆ.

ತಡರಾತ್ರಿ ತ್ರಿಕ್ಕಾಕರ ಪೊಲೀಸ್ ಠಾಣೆಯಲ್ಲಿ ರ‍್ಯಾಪರ್ ವಿರುದ್ಧ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇದನ್ ಹಿಂದೆಯೂ ಅನೇಕ ಆರೋಪಗಳನ್ನು ಎದುರಿಸಿದ್ದರು.ಈ ವರ್ಷದ ಏಪ್ರಿಲ್‍ನಲ್ಲಿ ಮಾದಕವಸ್ತು ಪ್ರಕರಣದಲ್ಲಿ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಳಿಕ ಅವರ ಬಳಿ ಚಿರತೆ ಹಲ್ಲಿನ ಪತ್ತೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇವುಗಳ ಜೊತೆಗೆ, ಈ ವರ್ಷದ ಮೇ ತಿಂಗಳಲ್ಲಿ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದ್ದಾರೆ ಮತ್ತು ತಮ್ಮ ಸಂಗೀತದ ಮೂಲಕ ಜಾತಿ ಆಧಾರಿತ ವಿಭಜನೆಯನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಿದ್ದರು.

Tags:
error: Content is protected !!