ಹೊಸದಿಲ್ಲಿ : ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯವಾಗಿದ್ದು, ವ್ಯಕ್ತಿಯೋರ್ವ ಮರವೇರಿ ಗೋಡೆ ಹಾರಿ ಸಂಸತ್ ಭವನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ. ಇಂದು ಬೆಳಿಗ್ಗೆ 6:30 ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಮರದ ಸಹಾಯದಿಂದ ಗೋಡೆ ಹಾರಿ ಸಂಸತ್ತಿನ ಆವರಣಕ್ಕೆ ಪ್ರವೇಶಿಸಿದ್ದಾನೆ.
ರೈಲ್ವೆ ಭವನ ಕಡೆಯಿಂದ ಗೋಡೆ ಹಾರಿ ಹೊಸದಾಗಿ ನಿರ್ಮಿಸಲಾದ ಸಂಸತ್ತು ಕಟ್ಟಡದ ಗರುಡ ದ್ವಾರ (ಗರುಡ ಗೇಟ್) ಗೆ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ. ಇದೀಗ ಶಂಕಿತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.





