Mysore
18
few clouds

Social Media

ಮಂಗಳವಾರ, 27 ಜನವರಿ 2026
Light
Dark

ಆರ್‌ಬಿಐ ನೂತನ ಗವರ್ನರ್‌ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೂತನ ಗವರ್ನರ್‌ ಆಗಿ ಕೇಂದ್ರ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್‌ ಮಲ್ಹೋತ್ರಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಗವರ್ನರ್‌ ಆಗಿರುವ ಶಕ್ತಿಕಾಂತ್‌ ದಾಸ್‌ ಅವರ ಸೇವಾವಧಿ ನಾಳೆಗೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌.11ರಂದು ಸಂಜಯ್‌ ಮಲ್ಹೋತ್ರಾ ಅವರು, ಆರ್‌ಬಿಐ ನೂತನ ಗವರ್ನರ್‌ ಆಗಿ ತಮ್ಮ ಕಾರ್ಯ ಆರಂಭಿಸಲಿದ್ದಾರೆ. ಮೂರು ವರ್ಷಗಳ ಕಾಲ ಅವರು ಅಧಿಕಾರದಲ್ಲಿರುತ್ತಾರೆ.

ಸಂಜಯ್‌ ಮಲ್ಹೋತ್ರಾ ಅವರು ರಾಜಸ್ಥಾನದ ಕೇಡರ್‌ನ 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಐಐಟಿ ಕಾನ್ಪುರ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಮಾಡಿದ್ದು, ಅಮೇರಿಕಾದ ಪ್ರಿನ್ಸ್‌ಟನ್‌ ಯೂನಿವರ್ಸಿಟಿಯ ಆಫ್‌ ಪಬ್ಲಿಕ್‌ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮುಗಿಸಿದ್ದಾರೆ.

ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿ ಛೇರ್ಮನ್‌ ಆಗಿ ಕಾರ್ಯ ನಿರ್ವಹಿಸಿದ್ದು, ಜಿಎಸ್‌ಟಿ ಮಂಡಳಿಯಲ್ಲೂ ಕೆಲಸ ಮಾಡಿದ್ದಾರೆ. ಇವರಿಗೆ ವಿದ್ಯುತ್‌, ತೆರಿಗೆ, ಹಣಕಾಸು, ಐಟಿ, ಗಣಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸದ್ಯ ಹಣಕಾಸು ಸಚಿವಾಲಯದಲ್ಲಿ ರೆವೆನ್ಯೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯುತ್‌ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ಸಂಜಯ್‌ ಮಲ್ಹೋತ್ರಾ, ವಿದ್ಯುತ್‌ ವಿತರಣೆಯಲ್ಲಿ 3 ಲಕ್ಷಕ್ಕೂ ಅಧಿಕ ಮೊತ್ತದ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು. ತೆರಿಗೆ, ಪಬ್ಲಿಕ್‌ ಫೈನಾನ್ಸ್‌, ಇಂಧನ ವಲಯದ ಸುಧಾರಣೆ, ಆರ್ಥಿಕ ಆಡಳಿತದ ವಿಚಾರಗಳಲ್ಲಿ ಅವರಿಗೆ ತುಂಬಾ ಅನುಭವವಿದೆ.

ಈ ಹಿನ್ನಲೆಯಲ್ಲಿ ಡಿಸೆಂಬರ್‌.11ರಂದು ಸಂಜಯ್‌ ಮಲ್ಹೋತ್ರಾ ಅವರು, ಆರ್‌ಬಿಐ ನೂತನ ಗವರ್ನರ್‌ ಆಗಿ ತಮ್ಮ ಸೇವೆ ಸಲ್ಲಿಸಲಿದ್ದಾರೆ.

 

Tags:
error: Content is protected !!