Mysore
24
scattered clouds

Social Media

ಮಂಗಳವಾರ, 03 ಡಿಸೆಂಬರ್ 2024
Light
Dark

500 ರೂ.ನಕಲಿ ನೋಟುಗಳ ಸಂಖ್ಯೆ ಏರಿಕೆ: ಕೇಂದ್ರದ ದತ್ತಾಂಶ

ಹೊಸದಿಲ್ಲಿ: 2018-19 ಹಾಗೂ 2022-23ನೇ ಸಾಲಿನ ನಡುವೆ ಪತ್ತೆಹಚ್ಚಲಾದ 500ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ಶೇ.317ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ದತ್ತಾಂಶದಲ್ಲಿ ಹೇಳಿದೆ.

2018-19 ನೇ ಸಾಲಿನಲ್ಲಿ 500 ರೂ ಮುಖಬೆಲೆಯ 2186.5 ಕೋಟಿ ನಕಲಿ ನೋಟುಗಳು ದೇಶದಾದ್ಯಂತ ಪತ್ತೆಯಾಗಿದ್ದವು. ಇದಕ್ಕೆ ಹೋಲಿಸಿದರೆ 2022-23 ನೇ ಸಾಲಿನಲ್ಲಿ 500 ರೂ ಮುಖಬೆಲೆಯ 9,111 ನಕಲಿ ನೋಟುಗಳು ದೇಶದಲ್ಲಿ ಪತ್ತೆಯಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಶೇ. 316.6 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸಹಾಯಕ ವಿತ್ತ ಸಚಿವ ಪಂಕಚ್ಚೌಧರಿ ಲೋಕಸಭೆಗೆ ತಿಳಿಸಿದರು.

ಈ ಕುರಿತು ಡಿಎಂಕೆ ಸಂಸದ ಟಿ. ಎಂ. ಸೆಲ್ವಗಣಪತಿ ಅವರು ಮಂಗಳವಾರ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಹಣಕಾಸು ಸಚಿವಾಲಯವು ಈ ದತ್ತಾಂಶಗಳನ್ನು ಬಹಿರಂಗಪಡಿಸಿದೆ.

ಆದರೆ 2023-24ನೇ ಸಾಲಿನಲ್ಲಿ 500 ರೂ ಮುಖಬೆಲೆಯ ನೋಟುಗಳ ಸಂಖ್ಯೆಯು 85,711ಕ್ಕೆ ಕುಸಿದಿದೆ ಎಂದು ಸಚಿವಾಲಯ ತಿಳಿಸಿದೆ.

Tags: