Mysore
18
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಅವಿವಾಹಿತ ಜೋಡಿಗಳಿಗೆ ನಿರ್ಬಂಧ: ಓಯೊದಿಂದ ಹೊಸ ನಿಯಮ ಜಾರಿ

ನವದೆಹಲಿ: ರಾಷ್ಟ್ರದ ಪ್ರಮುಖ ಟ್ರಾವೆಲ್‌ ಬುಕ್ಕಿಂಗ್‌ ಕಂಪೆನಿ ಓಯೊ ತನ್ನ ಚೆಕ್‌ ಇನ್‌ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅವಿವಾಹಿತ ಜೋಡಿಗಳಿಗೆ ಅವಕಾಶವಿಲ್ಲ ಎಂದು ಹೇಳಿದೆ.

ಈ ನೂತನ ನಿಯಮ ಸದ್ಯ ಮೀರತ್‌ನಲ್ಲಿ ಈ ನಿಯಮ ಜಾರಿಯಾಗಿದ್ದು, ಹೋಟೆಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ಪುರಾವೆಯನ್ನು ಒದಗಿಸಬೇಕು. ಅಲ್ಲದೇ ಆನ್‌ಲೈನ್‌ ಬುಕ್ಕಿಂಗ್‌ಗೂ ಈ ನಿಯಮ ಅಳವಡಿಕೆಯಾಗಲಿದೆ ಎಂದು ತಿಳಿಸಿದೆ.

ಓಯೊ ಕಂಪೆನಿ ತನ್ನ ಎಲ್ಲಾ ಪಾಲುದಾರ ಹೋಟೆಲ್‌ಗಳಿಗೆ ಈ ಮಾಹಿತಿಯನ್ನು ರವಾನಿಸಿದೆ. ತಕ್ಷಣವೇ ಇದನ್ನು ಜಾರಿಗೆ ತರಬೇಕು ಎಂದು ಮೀರತ್‌ನ ಪಾಲುದಾರ ಹೋಟೆಲ್‌ಗಳಿಗೆ ಕಂಪೆನಿ ಸೂಚನೆ ನೀಡಿದೆ. ಹೀಗಾಗಿ ಓಯೊ ಸುರಕ್ಷಿತ ಹಾಗೂ ಜವಾಬ್ದಾರಿಯುತ ಅತಿಥ್ಯ ಪದ್ಧತಿಗಳನ್ನು ಎತ್ತಿ ಹಿಡಿಯಲಾಗಿದೆ ಎಂದು ಹೇಳಿದೆ.

ಸ್ಥಳಿಯ ಸಾಮಾಜಿಕ ಸಂವೇದನೆಯನ್ನು ಗೌರವಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದು, ಆಯಾಯ ನಗರದ ಪ್ರತಿಕ್ರಿಯೆ ಪಡೆದು ಬೇರೆ ಸ್ಥಳಗಳಿಗೂ ಈ ನಿಯಮವನ್ನು ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅಧಿಕಾರಿ ಮೂಲಗಳು ತಿಳಿಸಿದೆ.

Tags:
error: Content is protected !!