ತಿರುಮಲದಲ್ಲಿ ಒಂದೇ ದಿನಕ್ಕೆ ದಾಖಲೆ ಹಣ ಸಂಗ್ರಹ

ತಿರುಮಲ :  ತಿರುಮಲ ತಿರುಪತಿಯ ತಿಮ್ಮಪ್ಪನ ದೇವಾಲಯದ ಹುಂಡಿಯಲ್ಲಿ ಒಂದೇ ದಿನಕ್ಕೆ ದಾಖಲೆಯ ಹಣ ಸಂಗ್ರಹವಾಗಿದೆ.

ಹೌದು, ತಿರುಪತಿ ತಿರುಮಲ ದೇವಾಲಯದಲ್ಲಿ ಒಂದೇ ದಿನದಲ್ಲಿ ೫.೪೧ ಕೋಟಿ ರೂ ದಾಖಲೆಯ ಹಣ ಸಂಗ್ರಹವಾಗಿದೆ.

ಜೂ.೧೮ರ ಮಂಗಳವಾರದಂದು ದೇವಾಲಯದ ಶ್ರೀವಾರಿ ಹುಂಡಿಯಲ್ಲಿ ಸಂಗ್ರಹವಾದ ಹಣ ಸುಮಾರು ೫ಕೋಟಿ ೪೧ ಲಕ್ಷ.

ಸಾಲು ಸಾಲು ರಜೆಯಿಂದಾಗಿ ದೇವಾಲಯಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆ ದೇವಾಲಯದ ಹುಂಡಿಗೆ ಈ ಹಿಂದಿಗಿಂತಲೂ ದಾಖಲೆಯ ಹಣ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.

ಮಂಗಳವಾರ ಒಂದೇ ದಿನ ಸುಮಾರು ೭೫ ಸಾವಿರ ೧೨೫ ಮಂದಿ ಭಕ್ತು ದೇವಾಲಯಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಆಡಳಿಮಂಡಳಿ ತಿಳಿಸಿದೆ.

ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಸುಮಾರು ೨೦ ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.